ಹಿಜ್ಬುಲ್ಲಾ ನೆಲೆಗಳ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ
ಜೆರುಸಲೇಮ್ , 25 ಏಪ್ರಿಲ್ (ಹಿ.ಸ):ಆ್ಯಂಕರ್:ದಕ್ಷಿಣ ಲೆಬನಾನ್ ನಲ್ಲಿರುವ ಹಿಜ್ಮುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡ
ತರರ


ಜೆರುಸಲೇಮ್ , 25 ಏಪ್ರಿಲ್ (ಹಿ.ಸ):ಆ್ಯಂಕರ್:ದಕ್ಷಿಣ ಲೆಬನಾನ್ ನಲ್ಲಿರುವ ಹಿಜ್ಮುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಇತ್ತೀಚೆಗಷ್ಟೇ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ನಡೆಸಿತ್ತು. ಇದಾದ ಬಳಿಕ ಇಸ್ರೇಲ್ ಕೂಡಲ ಇರಾನ್ ಮೇಲೆ ಪ್ರತಿದಾಳಿ ನಡೆಸಿತ್ತು. ಇದೀಗ ಇಸ್ರೇಲ್ ಹಿಜ್ಮುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ, ಇಸ್ರೇಲ್ನ ಭದ್ರತಾ ಪಡೆಯ ಯುದ್ಧ ವಿಮಾನಗಳು ದಕ್ಷಿಣ ಲೆಬನಾನ್ನ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ದಾಳಿ ನಡೆಸಿದೆ.

ಇದರ ನಡುವೆ ಇಸ್ರೇಲ್ ಗಡಿ ಸಮೀಪವಿರುವ ಗ್ರಾಮವೊಂದರ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ತಿಳಿಸಿವೆ.ದಕ್ಷಿಣ ಲೆಬನಾನ್ನಲ್ಲಿ ಮತ್ತು ಲೆಬನಾನ್ನ ಇತರ ಭಾಗಗಳಲ್ಲಿ ಇಸ್ರೇಲಿ ಮಿಲಿಟರಿ ಪಡೆಗಳು ನಿರಂತರ ಆಕ್ರಮಣ ಮಾಡುತ್ತಿವೆ.

ದಕ್ಷಿಣ ಲೆಬನಾನ್ನಲ್ಲಿ ಅರ್ಧದಷ್ಟು ಹಿಜ್ಬುಲ್ಲಾದ ಕಮಾಂಡರ್ಗಳನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿದ್ದಾರೆ. ಇಸ್ರೇಲಿ ಪಡೆಗಳು ಅಕ್ಟೋಬರ್ನಿಂದ ಲೆಬನಾನ್ನಲ್ಲಿ ಸುಮಾರು 250 ಹಿಜ್ಬುಲ್ಲಾ ಹೋರಾಟಗಾರರನ್ನು ಕೊಂದಿದ್ದಾರೆ. ನೆರೆಯ ಸಿರಿಯಾದಲ್ಲಿ ಇಸ್ರೇಲಿ ದಾಳಿಗಳಲ್ಲಿ ಇನ್ನೂ 30 ಮಂದಿ ಸಾವನ್ನಪ್ಪಿದ್ದಾರೆ. ಲೆಬನಾನ್ನಲ್ಲಿ 70 ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟರು ಮತ್ತು ಇಸ್ರೇಲ್ನಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದಂತೆ 18 ಜನರು ಕೊಲ್ಲಲ್ಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande