೨೬ ರಂದು ಒನ್ ವೆಬ್ ಇಂಡಿಯಾ-೨ ಮಿಷನ್ ಉಡಾವಣೆ
ನವದೆಹಲಿ,22 ಮಾರ್ಚ್ (ಹಿ.ಸ): ಆ್ಯಂಕರ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದೇ ಭಾನುವಾರ ೨೬ ರಂದು ಒನ್ ವೆ
ಿು


ನವದೆಹಲಿ,22 ಮಾರ್ಚ್ (ಹಿ.ಸ):

ಆ್ಯಂಕರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದೇ ಭಾನುವಾರ ೨೬ ರಂದು ಒನ್ ವೆಬ್ ಇಂಡಿಯಾ-೨ ಮಿಷನ್ ಅನ್ನು ಉಡಾವಣೆ ಮಾಡಲಿದೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನೊಂದಿಗಿನ ಒಪ್ಪಂದದಂತೆ ಯುಕೆ ಮೂಲದ ನೆಟ್ ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ ನ ೭೨ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿ ಭೂಮಿಯ ಕೆಳಕಕ್ಷೆಯಲ್ಲಿರಿಸಲಿದೆ. ಕಳೆದ ವರ್ಷದ ಅಕ್ಟೋಬರ್ ೨೩ ರಂದು ಮೊದಲ ಹಂತದಲ್ಲಿ ೩೬ ಉಪಗ್ರಹಗಳನ್ನು ಎಲ್ವಿಎಂ೩ ಎಂ೨ ಉಡಾವಣಾ ವಾಹಕ ಹೊತ್ತೊಯ್ದಿತ್ತು. ಎರಡನೇ ಹಂತದಲ್ಲಿ ಸುಮಾರು ೫ ಸಾವಿರದ ೮೦೫ ಕೆಜಿ ತೂಕದ ಉಳಿದ ೩೬ ಉಪಗ್ರಹಗಳನ್ನು ಎಲ್ ವಿಎಂ೩ಎಂ೩ ಉಡಾವಣಾ ವಾಹನ ಭೂಮಿಯ ಕೆಳಕಕ್ಷೆಯಲ್ಲಿ ೪೫೦ ಕಿಲೋಮೀಟರ್ ವರ್ತುಲದಲ್ಲಿ ಇರಿಸಲಿದೆ. ಚಂದ್ರಯಾನ್ ೨ ಸೇರಿದಂತೆ ಎಲ್ವಿಎಂ೩ಯ ಉಡಾವಣೆ ಐದು ಬಾರಿ ಸತತವಾಗಿ ಯಶಸ್ವಿಯಾಗಿದೆ. ಈ ಉಪಗ್ರಹಗಳು ಜಗತ್ತಿನ ಎಲ್ಲಾ ಮೂಲೆಗಳಿಗೂ ಬಾಹ್ಯಾಕಾಶ ಆಧಾರಿತ ಬ್ರಾಡ್ ಬ್ಯಾಂಡ್ ಸಂಪರ್ಕ ಸಾಧ್ಯವಾಗಿಸುವಂತೆ ಮಾಡಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande