60 ಸಾವಿರ ಗಡಿ ದಾಟಿದ ಚಿನ್ನದ ಬೆಲೆ
ಬೆಂಗಳೂರು,22 ಮಾರ್ಚ್ (ಹಿ.ಸ): ಆ್ಯಂಕರ್ : ಯುಗಾದಿ ಹಬ್ಬಕ್ಕೆ ರಾಜ್ಯದ ಜನರಿಗೆ ಗೋಲ್ಡ್ ಶಾಕ್ ನೀಡಿದ್ದು, ಹತ್ತು
ುು


ಬೆಂಗಳೂರು,22 ಮಾರ್ಚ್ (ಹಿ.ಸ):

ಆ್ಯಂಕರ್

: ಯುಗಾದಿ ಹಬ್ಬಕ್ಕೆ ರಾಜ್ಯದ ಜನರಿಗೆ ಗೋಲ್ಡ್ ಶಾಕ್ ನೀಡಿದ್ದು, ಹತ್ತು ಗ್ರಾಂ ಚಿನ್ನದ ದರ 60 ಸಾವಿರ ಗಡಿ ದಾಟಿದೆ. ಆದರೆ ಸದ್ಯ ಹಳದಿ ಲೋಹದ ದರ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಬಂಗಾರ ಈಗ ಹತ್ತು ಗ್ರಾಂಗೆ 60 ಸಾವಿರ ಗಡಿ ದಾಟಿ ದಾಖಲೆ ಮಾಡಿದೆ. ಸದ್ಯ ಈ ದರ ಇಳಿಕೆ ಕಾಣುವ ಲಕ್ಷಣ ಕಾಣಿಸುತ್ತಿಲ್ಲ ಅನ್ನೋದು ಹಣಕಾಸು ತಜ್ಞರು ಅಂದಾಜು ಮಾಡಿದ್ದಾರೆ. ಚಿನ್ನದ ದರದ ಓಟ ನೋಡಿದ್ರೇ ಮುಂದಿನ ದಿನದಲ್ಲಿ ಶೇ 10-15ರಷ್ಟು ದರ ಏರಿಕೆ ಕಾಣುವ ಸಾಧ್ಯತೆ ಇದೆಯಂತೆ. ಅಂದರೆ ಹತ್ತು ಗ್ರಾಂ ಚಿನ್ನಕ್ಕೆ 70 ರಿಂದ 75 ಸಾವಿರಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande