ಅಮಿತ್ ಶಾ 180 ಕಂಪನಿಗಳ ಷೇರುಗಳಲ್ಲಿ ಹೂಡಿಕೆ
ನವದೆಹಲಿ, 23 ಏಪ್ರಿಲ್ (ಹಿ.ಸ):ಆ್ಯಂಕರ್:ರಾಹುಲ್ ಗಾಂಧಿ ಅವರ ಹೂಡಿಕೆ ವಿವರ ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿಯಾಗಿತ
ಿುಿುಿ


ನವದೆಹಲಿ, 23 ಏಪ್ರಿಲ್ (ಹಿ.ಸ):ಆ್ಯಂಕರ್:ರಾಹುಲ್ ಗಾಂಧಿ ಅವರ ಹೂಡಿಕೆ ವಿವರ ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿಯಾಗಿತ್ತು. ಬಿಜೆಪಿಯ ತೇಜಸ್ವಿ ಸೂರ್ಯ ಕೂಡ ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಬಹಳಷ್ಟು ಜನರ ಗಮನ ಸೆಳೆದಿರುವುದು ಅಮಿತ್ ಶಾ ಅವರ ಹೂಡಿಕೆ. ಅಮಿತ್ ಶಾ ಹಾಗೂ ಅವರ ಪತ್ನಿ ಇಬ್ಬರೂ ಸೇರಿ 250ಕ್ಕೂ ಹೆಚ್ಚು ಷೇರುಗಳನ್ನು ಬಹಳ ಯೋಚಿಸಿ ಹೂಡಿಕೆಗೆ ಆಯ್ದುಕೊಂಡಂತಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಅಮಿತ್ ಶಾ ತಾನು 180 ಕಂಪನಿಗಳ ಷೇರುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅವರ ಪತ್ನಿ ಸೋನಾಲ್ ಷಾ ಸುಮಾರು 80 ಕಂಪನಿಗಳ ಷೇರುಗಳನ್ನು ಖರೀದಿಸಿದ್ದಾರೆ. ಅಮಿತ್ ಶಾ ಅವರ ಷೇರು ಸಂಪತ್ತಿನ ಇವತ್ತಿನ ಮೌಲ್ಯ 17.46 ಕೋಟಿ ರೂ ಆಗುತ್ತದೆ. ಅವರ ಪತ್ನಿಯ ಷೇರುಸಂಪತ್ತು ಅಂದಾಜು 20 ಕೋಟಿ ಆಗುತ್ತದೆ. ಇಬ್ಬರೂ ಸೇರಿ ಹೊಂದಿರುವ ಷೇರುಸಂಪತ್ತು 40 ಕೋಟಿ ರೂ ಸಮೀಪ ಇದೆ.

ಅಮಿತ್ ಶಾ ದಂಪತಿ ಒಟ್ಟು ಸುಮಾರು 250 ಕಂಪನಿಗಳ ಷೇರುಗಳ ಮೇಲೆ ಹಣ ತೊಡಗಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಷೇರುಗಳೆಂದು ಸುಮಾರು 20 ಕಂಪನಿಗಳನ್ನು ಗುರುತಿಸಬಹುದು. ಇವರು ಒಂದು ಕೋಟಿ ರೂಗೂ ಹೆಚ್ಚು ಷೇರು ಸಂಪತ್ತು ಹೊಂದಿರುವ ಕಂಪನಿಗಳು ಹತ್ತು ಇವೆ.

ಸೋನಾಲ್ ಮತ್ತು ಅಮಿತ್ ಶಾ ಷೇರುಪಾಲು ಹೊಂದಿರುವ ಪ್ರಮುಖ 10 ಕಂಪನಿಗಳು

ಕೆನರಾ ಬ್ಯಾಂಕ್

ಪ್ರಾಕ್ಟರ್ ಅಂಡ್ ಗ್ಯಾಂಬಲ್

ಕರೂರ್ ವೈಸ್ಯ ಬ್ಯಾಂಕ್

ಗುಜರಾತ್ ಫ್ಲೋರೋಕೆಮಿಕಲ್ಸ್

ಲಕ್ಷ್ಮೀ ಮೆಷಿನ್ ವರ್ಕ್ಸ್

ಹಿಂದೂಸ್ತಾನ್ ಯುನಿಲಿವರ್ ಲಿ

ಎಂಆರ್ಎಫ್

ಭಾರ್ತಿ ಏರ್ಟೆಲ್

ಕೋಲ್ಗೇಟ್ ಪಾಲ್ಮೋಲಿವ್

ಸನ್ ಫಾರ್ಮಾ

ಹಿಂದೂಸ್ತಾನ್ ಸಮಾಚಾರ್


 rajesh pande