ದೆಹಲಿಗೆ ಆಗಮಿಸಿದ ಜಪಾನ್ ಪ್ರಧಾನಿ ಕಿಶಿಡಾ ಫುಮಿಯೊ
ನವದೆಹಲಿ,20 ಮಾರ್ಚ್ (ಹಿ.ಸ): ಆ್ಯಂಕರ್ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಇಂದು
ಮಮ


ನವದೆಹಲಿ,20 ಮಾರ್ಚ್ (ಹಿ.ಸ):

ಆ್ಯಂಕರ್

ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ್ದಾರೆ.

ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರ ಸಭೆಯಲ್ಲಿ ಉಭಯ ರಾಷ್ಟ್ರಗಳ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ೨೦೧೪ ರಲ್ಲಿ ಭಾರತ-ಜಪಾನ್ ಸಂಬಂಧವನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಕೊಂಡೊಯ್ಯಲಾಗಿತ್ತು. ಭಾರತ - ಜಪಾನ್ ಪಾಲುದಾರಿಕೆ ಅಡಿ ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಮೊದಲಾದ ವಲಯಗಳು ಸೇರಿವೆ. ರಕ್ಷಣೆ ಮತ್ತು ಭದ್ರತಾ ಸಹಕಾರವು ಭಾರತ - ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ಒಂದು ಪ್ರಮುಖ ಅಂಶವಾಗಿದೆ. ೨೦೧೫ ರಲ್ಲಿ ಸಹಿ ಹಾಕಲಾದ ರಕ್ಷಣಾ ಸಲಕರಣೆ ಮತ್ತು ತಂತ್ರಜ್ಞಾನ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿವೆ. ಭಾರತ ಮತ್ತು ಜಪಾನ್ ಜಿ-೨೦ ಮತ್ತು ಜಿ-೭ ಅಧ್ಯಕ್ಷತೆಯನ್ನು ಹೊಂದಿರುವ ಮಹತ್ವದ ಸಮಯದಲ್ಲಿ ಉಭಯ ಪ್ರಧಾನ ಮಂತ್ರಿಗಳ ನಡುವಿನ ಸಭೆ ನಡೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande