ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿ
ಬೆಂಗಳೂರು,20 ಮಾರ್ಚ್ (ಹಿ.ಸ): ಆ್ಯಂಕರ್ : ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್(ಸ್ಯಾಫ್)ನ 14ನೇ ಆವೃತ್ತಿಯ ಚಾಂಪಿಯನ್
್್


ಬೆಂಗಳೂರು,20 ಮಾರ್ಚ್ (ಹಿ.ಸ):

ಆ್ಯಂಕರ್ :

ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್(ಸ್ಯಾಫ್)ನ 14ನೇ ಆವೃತ್ತಿಯ ಚಾಂಪಿಯನ್ಶಿಪ್ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಭಾನುವಾರ ಇಲ್ಲಿನ ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಈ ವಿಷಯವನ್ನು ತಿಳಿಸಿದರು.

ಭಾರತ 4ನೇ ಬಾರಿಗೆ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ಬೆಂಗಳೂರಲ್ಲಿ ಮೊದಲ ಬಾರಿಗೆ ಟೂರ್ನಿ ನಡೆಯಲಿದೆ. ಈ ಹಿಂದೆ 1999ರಲ್ಲಿ ಗೋವಾ, 2011ರಲ್ಲಿ ನವದೆಹಲಿ, 2015ರಲ್ಲಿ ತಿರುವನಂತಪುರಂ ನಗರಗಳು ಆತಿಥ್ಯ ವಹಿಸಿದ್ದವು.

ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ನೇಪಾಳ ಸೇರಿ ಒಟ್ಟು 6 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ತಲಾ 3 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಿ, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಗುತ್ತದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್ಗೇರಲಿವೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಚೌಬೆ ಹೇಳಿದ್ದಾರೆ. ಭಾರತ 8 ಬಾರಿ ಚಾಂಪಿಯನ್ ಆಗಿದ್ದು, ಮಾಲ್ಡೀವ್್ಸ 2, ಬಾಂಗ್ಲಾ, ಆಫ್ಘನ್, ಶ್ರೀಲಂಕಾ ತಲಾ ಒಮ್ಮೆ ಪ್ರಶಸ್ತಿ ಜಯಿಸಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande