ಜಪಾನ್ ಪ್ರಧಾನಿ ಇದೇ ೨೦ ರಿಂದ 2 ದಿನಗಳ ಭಾರತ ಭೇಟಿ
ನವದಹೆಲಿ, 17 ಮಾರ್ಚ್ (ಹಿ.ಸ): ಆ್ಯಂಕರ್ :ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಇದೇ ೨೦ ಮತ್ತು ೨೧ ರಂದು ಭಾರತಕ್ಕೆ ಅಧಿಕೃತ
್್


ನವದಹೆಲಿ, 17 ಮಾರ್ಚ್ (ಹಿ.ಸ):

ಆ್ಯಂಕರ್ :ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಇದೇ ೨೦ ಮತ್ತು ೨೧ ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ನವದೆಹಲಿಯಲ್ಲಿಂದು ಹೇಳಿದ್ದಾರೆ. ಜಪಾನ್, ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಭೇಟಿ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶಾಂಘೈ ಸಹಕಾರ ಸಂಘ - ಎಸ್ ಸಿ ಒ ದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ರಕ್ಷಣಾ ಸಚಿವರಿಗೆ ಭಾರತದ ಆಹ್ವಾನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ ಸಿ ಒ ಅಧ್ಯಕ್ಷತೆ ಹೊಂದಿರುವ ಭಾರತ, ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಆಹ್ವಾನ ನೀಡಿದೆ ಎಂದರು. ಭಾರತದ ಭದ್ರತೆಯ ವಿಷಯಗಳ ಬಗ್ಗೆ ನಿಗಾ ಇಡಲಾಗುವುದೂ ಎಂದೂ ಸಹ ಅರಿಂದಮ್ ಬಗ್ಚಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande