ಬೆಳ್ಳಿ ತುಸು ದುಬಾರಿ
ಮುಂಬೈ, 31 ಜನವರಿ(ಹಿ.ಸ): ಆ್ಯಂಕರ್ : : ಕಳೆದೆರಡು ವಹಿವಾಟುಗಳಲ್ಲಿ ಏರಿಕೆಯಾಗದೇ ಇದ್ದ ಬೆಳ್ಳಿ ಬೆಲೆ ಇಂದು ತುಸು ಹೆಚ್
ಬೆಳ್ಳಿ ತುಸು ದುಬಾರಿ


ಮುಂಬೈ, 31 ಜನವರಿ(ಹಿ.ಸ):

ಆ್ಯಂಕರ್ :

: ಕಳೆದೆರಡು ವಹಿವಾಟುಗಳಲ್ಲಿ ಏರಿಕೆಯಾಗದೇ ಇದ್ದ ಬೆಳ್ಳಿ ಬೆಲೆ ಇಂದು ತುಸು ಹೆಚ್ಚಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ತುಸು ಇಳಿಕೆಯಾಗಿದ್ದ ಬೆಳ್ಳಿ ದರ ಅದಕ್ಕೂ ಮೊದಲಿನ ವಹಿವಾಟಿನಲ್ಲಿ ತಟಸ್ಥವಾಗಿತ್ತು. ಮತ್ತೊಂದೆಡೆ, ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಇಂದು ತಟಸ್ಥವಾಗಿದೆ. 1 ಕೆಜಿ ಬೆಳ್ಳಿ ಬೆಲೆ 200 ರೂ. ಏರಿಕೆಯಾಗಿ 72,400 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಬದಲಾಗದೆ 52,650 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, 57,440 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಏರಿಕೆಯಾಗಿ 72,400 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ – 53,500 ರೂ.

ಮುಂಬೈ- 52,650 ರೂ.

ದೆಹಲಿ- 52,800 ರೂ.

ಕೊಲ್ಕತ್ತಾ- 52,650 ರೂ.

ಬೆಂಗಳೂರು- 52,700 ರೂ.

ಹೈದರಾಬಾದ್- 52,650 ರೂ.

ಕೇರಳ- 52,650 ರೂ.

ಪುಣೆ- 52,650 ರೂ.

ಮಂಗಳೂರು- 52,700 ರೂ.

ಮೈಸೂರು- 52,700 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 58,370 ರೂ.

ಮುಂಬೈ- 57,440 ರೂ.

ದೆಹಲಿ- 57,590 ರೂ.

ಕೊಲ್ಕತ್ತಾ- 57,440 ರೂ.

ಬೆಂಗಳೂರು- 57,490 ರೂ.

ಹೈದರಾಬಾದ್- 57,440 ರೂ.

ಕೇರಳ- 57,440 ರೂ.

ಪುಣೆ- 57,440 ರೂ.

ಮಂಗಳೂರು- 57,490 ರೂ.

ಮೈಸೂರು- 57,490 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

ಬೆಂಗಳೂರು- 74,700 ರೂ.

ಮೈಸೂರು- 74,700 ರೂ.

ಮಂಗಳೂರು- 74,700 ರೂ.

ಮುಂಬೈ- 72,400 ರೂ.

ಚೆನ್ನೈ- 74,700 ರೂ.

ದೆಹಲಿ- 72,400 ರೂ.

ಹೈದರಾಬಾದ್- 74,700 ರೂ.

ಕೊಲ್ಕತ್ತಾ- 72,400 ರೂ.

ಹಿಂದೂಸ್ತಾನ್ ಸಮಾಚಾರ್


 rajesh pande