ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ
ಇಸ್ಲಾಮಾಬಾದ್, 24 ಜನವರಿ(ಹಿ.ಸ): ಆ್ಯಂಕರ್ : ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಇದೀಗ ಕತ್ತಲಲ್ಲಿ ಮುಳು
ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ


ಇಸ್ಲಾಮಾಬಾದ್, 24 ಜನವರಿ(ಹಿ.ಸ):

ಆ್ಯಂಕರ್ :

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಇದೀಗ ಕತ್ತಲಲ್ಲಿ ಮುಳುಗಿದೆ. ಮೊದಲು ದೇಶದಲ್ಲಿ ಗೋದಿ ಹಿಟ್ಟು ಖಾಲಿಯಾಯಿತು. ನಂತರ ಗ್ಯಾಸ್ ಮತ್ತು ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಈಗ ವಿದ್ಯುತ್ ಅಭಾವ ಹೆಚ್ಚಾಗಿದೆ. ಕ್ವೆಟ್ಟಾ ಮತ್ತು ಗುಡ್ಡು ನಡುವಿನ ಹೈ-ಟೆನ್ಷನ್ ಟ್ರಾನ್ಸ್ಮಿಷನ್ ಲೈನ್ನಲ್ಲಿನ ದೋಷದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಿದೆ. ಪಾಕಿಸ್ತಾನ ಈಗಾಗಲೇ ವಿದ್ಯುತ್ ಕೊರತೆ, ದೀರ್ಘಕಾಲದ ವಿದ್ಯುತ್ ಕಡಿತ ಎದುರಿಸುತ್ತಿದೆ. ವಿದ್ಯುತ್ ಉಳಿತಾಯಕ್ಕಾಗಿ ಮಾರುಕಟ್ಟೆಗಳನ್ನು ೮ ಗಂಟೆಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕ್ವೆಟ್ಟಾ, ಇಸ್ಲಾಮಾಬಾದ್, ಲಾಹೋರ್ ಸೇರಿದಂತೆ ಬಲೂಚಿಸ್ತಾನದ ೨೨ ಜಿಲ್ಲೆಗಳು, ಮುಲ್ತಾನ್ ಪ್ರದೇಶದ ನಗರಗಳು ಮತ್ತು ಕರಾಚಿಯಂತಹ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಲಾಹೋರ್ನ ಮಾಲ್ ರೋಡ್, ಕೆನಾಲ್ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಪ್ರಸರಣ ಮಾರ್ಗಗಳಲ್ಲಿನ ತಾಂತ್ರಿಕ ದೋಷಗಳು ಸಿಂಧ್, ಖೈಬರ್, ಪಂಜಾಬ್ ಮತ್ತು ರಾಜಧಾನಿಯಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾಗಿವೆ. ರಾಷ್ಟ್ರೀಯ ಗ್ರಿಡ್ನಲ್ಲಿ ವ್ಯತ್ಯಯ ಉಂಟಾಗಿದೆ. ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿಯ ೧೧೭ ಗ್ರಿಡ್ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ವಿದ್ಯುತ್ ಪೂರೈಕೆ ಮರುಸ್ಥಾಪಿಸಲು ಪ್ರಯತ್ನ ನಡೆಯುತ್ತಿವೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande