ಓಮಿಕ್ರೋನ್ ತಲ್ಲಣ - ತೈಲ ಉತ್ಪಾದನೆ ಪ್ರಮಾಣ ನಿಗದಿ ನಿರ್ಧಾರಕ್ಕೆ ಬದ್ಧವಾದ ಓಪೆಕ್ ರಾಷ್ಟ್ರಗಳು
3 ಡಿಸೆಂಬರ್(ಹಿ.ಸ) ಆ್ಯಂಕರ್ : ಕೋವಿಡ್ ವೈರಸ್ ರೂಪಾಂತರ ಓಮಿಕ್ರೋನ್ ಭೀತಿ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿದೆ. ಈ ಹಿನ
ತೈಲ ಉತ್ಪಾದನೆ


3 ಡಿಸೆಂಬರ್(ಹಿ.ಸ) ಆ್ಯಂಕರ್ : ಕೋವಿಡ್ ವೈರಸ್ ರೂಪಾಂತರ ಓಮಿಕ್ರೋನ್ ಭೀತಿ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಯುವ ಸಾಧ್ಯತೆ ಇದ್ದರೂ, ಜನವರಿಯಿಂದ ತಿಂಗಳಿಗೆ ಇಂತಿಷ್ಟೇ ತೈಲ ಉತ್ಪಾದನೆ ಮಾಡಬೇಕೆಂಬ ನಿಯಮಕ್ಕೆ ಬದ್ಧವಾಗಿರಲು ಕಚ್ಚಾತೈಲ ಉತ್ಪಾದಿಸಿ ರವಾನಿಸುವ ಒಪೆಕ್ ಮತ್ತು ಒಪೆಕ್ ಮೈತ್ರಿಕೂಟದ ರಾಷ್ಟ್ರಗಳು ನಿರ್ಧರಿಸಿವೆ.

ಇತ್ತೀಚೆಗೆ ಭಾರತ, ಚೀನಾ ಸೇರಿದಂತೆ ಅಮೆರಿಕ ನೇತೃತ್ವದ ಕೆಲವು ರಾಷ್ಟ್ರಗಳು ತಮ್ಮಲ್ಲಿ ಮೀಸಲಿಟ್ಟಿರುವ ಕಚ್ಚಾ ತೈಲವನ್ನು ಹೊರ ತೆಗೆದು, ಒಪೆಕ್ ರಾಷ್ಟ್ರಗಳಿಂದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿ, ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳಿಗೆ ಹಾಕಿದ್ದ ಬೆದರಿಕೆಗೆ ಒಪೆಕ್ ರಾಷ್ಟ್ರಗಳು ಸ್ವಲ್ಪ ಸ್ಪಂದಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೆಲೆ ಸಾಕಷ್ಟು ಏರಿಕೆ ಕಂಡ ಹಿನ್ನೆಲೆ ತೈಲ ಬೆಲೆ ಇಳಿಕೆ ಮಾಡುವಂತೆ ಕೆಲವು ರಾಷ್ಟ್ರಗಳು ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿದ್ದವು.

ಆದರೆ, ತೈಲ ಉತ್ಪಾದನಾ ರಾಷ್ಟ್ರಗಳು ಮನವಿ ತಿರಸ್ಕರಿಸಿದ ಕಾರಣಕ್ಕೆ ತಮ್ಮಲ್ಲಿ ತುರ್ತು ಕಾಲಕ್ಕೆ ಮೀಸಲಿಟ್ಟಿರುವ ಕಚ್ಚಾ ತೈಲವನ್ನೇ ಉಪಯೋಗಿಸಿ, ತೈಲ ಬೆಲೆ ಇಳಿಸುವಂತೆ ಒತ್ತಡ ಹೇರಿದ್ದವು. ಆದರೂ ಒಪೆಕ್ ರಾಷ್ಟ್ರಗಳು ಈಗ ತೈಲ ಬೆಲೆ ಇಳಿಕೆ ಮಾಡಲು ಒಲವು ತೋರಲಿಲ್ಲ.

ಅದರಲ್ಲೂ ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಗಳು ಗಗನಕ್ಕೇರಿದ್ದರಿಂದ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡಲು ಅಮೆರಿಕ ಪದೇಪದೆ ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿತ್ತು. ಅದರ ಜೊತೆಗೆ ಮೀಸಲು ತೈಲವನ್ನು ಬಳಸಿಕೊಳ್ಳುವುದಾಗಿ ಹೇಳಿತ್ತು.

ಕಚ್ಚಾ ತೈಲವನ್ನು ಹೆಚ್ಚು ಉತ್ಪಾದನೆ ಮಾಡಿದರೆ, ಅವುಗಳ ಪರಿಣಾಮ ತೈಲ ಬೆಲೆಯ ಮೇಲೆ ಆಗುತ್ತದೆ ಎಂದು ಭಾವಿಸಿದ ರಾಷ್ಟ್ರಗಳು ಜನವರಿಯಿಂದ ಇಂತಿಷ್ಟೇ ತೈಲವನ್ನು ಉತ್ಪಾದನೆ ಮಾಡಬೇಕೆಂಬ ನಿಯಮವನ್ನು ಹೊರ ತಂದಿವೆ.

ಅದರ ಪ್ರಕಾರ ಒಂದು ದಿನಕ್ಕೆ 4 ಲಕ್ಷ ಬ್ಯಾರೆಲ್ಗಳನ್ನು ಮಾತ್ರವೇ ಉತ್ಪಾದನೆ ಮಾಡಬೇಕು ಅಥವಾ ಒಂದು ತಿಂಗಳಿಗೆ ನಿಗದಿಪಡಿಸಿದ ಬ್ಯಾರೆಲ್ಗಳಿಂತ ಕಡಿಮೆ ಕಚ್ಚಾ ತೈಲ ಉತ್ಪಾದನೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಇದೇ ನಿಯಮಕ್ಕೆ ಅಂಟಿಕೊಂಡಿರಲು ಒಪೆಕ್ ರಾಷ್ಟ್ರಗಳು ಈಗ ನಿರ್ಧಾರ ಮಾಡಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande