2028ರ ಚುನಾವಣೆಯಲ್ಲಿ ಜನರೇ ಉತ್ತರಿಸುತ್ತಾರೆ : ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ''ಯಾವುದೇ ಒಂದು ಯುದ್ಧವನ್ನು ಮಾಡಬೇಕಾದರೆ ಅದರ ಬಗ್ಗೆ ಮೊದಲೇ ಮಾತನಾಡಬಾರದು. ಯುದ್ಧದ ನೀತಿಯ ಬಗ್ಗೆ ಚರ್ಚೆ ಮಾಡಬಾರದು. ರಣರಂಗದಲ್ಲಿ ಯಾರು ರಣಹೇಡಿಗಳು ಎಂಬುದು ಮುಂದೆ ಗೊತ್ತಾಗುತ್ತದೆ'' ಎಂದು ಶಾಸಕ ನಾರಾ ಭರತರೆಡ್ಡಿ ಅವರು ಟೀಕಿಸಿದ್ದಾರೆ. ಸು
2028ರ ಚುನಾವಣೆಯಲ್ಲಿ ಜನರೇ ಉತ್ತರಿಸುತ್ತಾರೆ : ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : 'ಯಾವುದೇ ಒಂದು ಯುದ್ಧವನ್ನು ಮಾಡಬೇಕಾದರೆ ಅದರ ಬಗ್ಗೆ ಮೊದಲೇ ಮಾತನಾಡಬಾರದು. ಯುದ್ಧದ ನೀತಿಯ ಬಗ್ಗೆ ಚರ್ಚೆ ಮಾಡಬಾರದು. ರಣರಂಗದಲ್ಲಿ ಯಾರು ರಣಹೇಡಿಗಳು ಎಂಬುದು ಮುಂದೆ ಗೊತ್ತಾಗುತ್ತದೆ' ಎಂದು ಶಾಸಕ ನಾರಾ ಭರತರೆಡ್ಡಿ ಅವರು ಟೀಕಿಸಿದ್ದಾರೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 2028ರ ಚುನಾವಣೆಯೇ ನಮ್ಮ ಎದುರಾಳಿಗೆ ಉತ್ತರ ನೀಡುವ ಸಂದರ್ಭ. ಜನರೇ ತೀರ್ಮಾನವೇ ಅಂತಿಮ. ಜನರು ಯಾರಿಗೆ ಯಾವ ರೀತಿಯ ಉತ್ತರವನ್ನು ನೀಡುತ್ತಾರೆ ಎನ್ನುವುದು ಅವರಿಗೇ ಗೊತ್ತು. ಅಲ್ಲಿಯವರೆಗೂ ನಾವೆಲ್ಲರೂ ಕಾಯಬೇಕು ಎಂದು ಅವರು ಶಾಸಕ ಜಿ. ಜನಾರ್ಧನರೆಡ್ಡಿ ಅವರ ಹೆಸರನ್ನು ಪ್ರಸ್ತಾಪಿಸದೇ ಹೇಳಿದರು.

2028ರಲ್ಲಿ ಯುದ್ಧದ ಸಮಯ ಬರುತ್ತದೆ. ಆಗಲೇ, ಶಾಸಕ ಜಿ. ಜನಾರ್ಧನರೆಡ್ಡಿ ಅವರಿಗೆ ಉತ್ತರ ಸಿಗಲಿದೆ. ಜನರ ಮನಸ್ಸನ್ನು ಗೆಲ್ಲುವುದೇ ನಮ್ಮ ಗುರಿ. ಜನರೇ ಅಂತಿಮ ತೀರ್ಮಾನವನ್ನು ನೀಡುತ್ತಾರೆ. ಬಳ್ಳಾರಿ ಜಿಲ್ಲೆ ಮತ್ತು ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಗಮನ ಹರಿಸುತ್ತೇವೆ. ಬೇರೆ ವಿಚಾರಗಳು ಬೇಡ ಎಂದರು.

`ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ'

ಬಳ್ಳಾರಿಯ ಮಹರ್ಷಿ ಶ್ರೀ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿಯನ್ನು ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಸರ್ಕಾರ ಪುತ್ಥಳಿಯನ್ನು ಉದ್ಘಾಟನೆ ಮಾಡಲು ಪರವಾನಿಗೆ ನೀಡಿದೆ. ಶೀಘ್ರದಲ್ಲೇ ಪುತ್ಥಳಿಯನ್ನು ಉದ್ಘಾಟಿಸಲಾಗುತ್ತದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande