ಹಿಂದಿ ಕೇವಲ ಭಾಷೆಯಲ್ಲ; ಭಾರತದ ಸಂಸ್ಕೃತಿ, ನಾಗರಿಕತೆ, ಜೀವನ ಮೌಲ್ಯಗಳ ಅಭಿವ್ಯಕ್ತಿ: ರಾಜನಾಥ್ ಸಿಂಗ್
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಹಿಂದಿ ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಸಂಸ್ಕೃತಿ, ನಾಗರಿಕತೆ ಮತ್ತು ಜೀವನ ಮೌಲ್ಯಗಳ ಸಶಕ್ತ ಅಭಿವ್ಯಕ್ತಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹಿಂದಿ ನಮ್ಮ ವೈವಿಧ್ಯತೆಯನ್ನು ಏಕತೆಯ ಸೂತ್ರದಲ್ಲಿ ಬೆಸೆಯುವ ಭಾಷೆಯಾಗಿದೆ. ಹಿಂ
ರಾಜನಾಥ ಸಿಂಗ್


ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಹಿಂದಿ ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಸಂಸ್ಕೃತಿ, ನಾಗರಿಕತೆ ಮತ್ತು ಜೀವನ ಮೌಲ್ಯಗಳ ಸಶಕ್ತ ಅಭಿವ್ಯಕ್ತಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹಿಂದಿ ನಮ್ಮ ವೈವಿಧ್ಯತೆಯನ್ನು ಏಕತೆಯ ಸೂತ್ರದಲ್ಲಿ ಬೆಸೆಯುವ ಭಾಷೆಯಾಗಿದೆ. ಹಿಂದಿಯ ಗೌರವವನ್ನು ಹೆಚ್ಚಿಸುವುದು ನಮ್ಮ ಸಮೃದ್ಧ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿ ದಿನದ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಹಿಂದಿ ಭಾಷೆಯ ಸಂರಕ್ಷಣೆ, ಸಂವರ್ಧನೆ ಹಾಗೂ ಪ್ರಚಾರ-ಪ್ರಸಾರಕ್ಕಾಗಿ ಎಲ್ಲರೂ ಸಂಕಲ್ಪ ತೊಡಬೇಕು. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ನವೋದ್ಯಮದ ಕ್ಷೇತ್ರಗಳಲ್ಲಿ ಹಿಂದಿಯನ್ನು ಇನ್ನಷ್ಟು ಸಶಕ್ತಗೊಳಿಸಬೇಕು ಎಂದು ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ.

ಹಿಂದಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಹಿಂದಿ ದಿನದ ಹಾರ್ದಿಕ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande