
ಬೆಂಗಳೂರು, 28 ಆಗಸ್ಟ್ (ಹಿ.ಸ.)
ಆ್ಯಂಕರ್:
ಅವೈಜ್ಞಾನಿಕ ನಿರ್ಮಾಣದ ಆರೋಪಕ್ಕೆ ಒಳಗಾಗಿರುವ ಬೆಂಗಳೂರಿನ ಕೂಡ್ಲು ಗ್ರಾಮದ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯ ಸುಮಾರು ₹200 ಕೋಟಿ ವೆಚ್ಚದ ಬೃಹತ್ ವಸತಿ ಸಂಕೀರ್ಣದ ತೆರವು ಕಾರ್ಯಾಚರಣೆ ಶುಕ್ರವಾರ ಅಧಿಕೃತವಾಗಿ ಆರಂಭವಾಗಿದೆ.
ವಿವಾದಿತ ‘ಇ’ ಬ್ಲಾಕ್‌ನ 49 ಅಪಾರ್ಟ್‌ಮೆಂಟ್‌ಗಳನ್ನು ಸುರಕ್ಷಿತ ಹಾಗೂ ನಿಯಂತ್ರಿತ ರೀತಿಯಲ್ಲಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಯಾವುದೇ ವಿಶೇಷ ದೂರುಗಳಿಲ್ಲದಿದ್ದರೂ, ನಿಯಮಗಳ ಪಾಲನೆ ಹಾಗೂ ಮುಂದಿನ ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಯೇ ಬಿಬಿಎಂಪಿಗೆ ಪತ್ರ ಬರೆದು ಕಟ್ಟಡ ತೆರವುಗೊಳಿಸುತ್ತಿದೆ ಎಂದು ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ.
ಮುಂಬೈನ ಖಾಸಗಿ ಸಂಸ್ಥೆಗೆ ತೆರವು ಕಾರ್ಯದ ಗುತ್ತಿಗೆ ನೀಡಲಾಗಿದ್ದು, ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ತೊಂದರೆಯಾಗದಂತೆ ‘ಫ್ಲ್ಯಾಟ್ ಬೈ ಫ್ಲ್ಯಾಟ್’ ಮಾದರಿಯಲ್ಲಿ ಮುಂದಿನ ಆರು ತಿಂಗಳಲ್ಲಿ ಕಟ್ಟಡ ತೆರವುಗೊಳಿಸಲಾಗುವುದು ಎಂದರು.
ಈಗಾಗಲೇ ಫ್ಲ್ಯಾಟ್‌ಗಳನ್ನು ಕಾಯ್ದಿರಿಸಿರುವ ಗ್ರಾಹಕರೊಂದಿಗೆ ಮಾತುಕತೆ ನಡೆಸಿ ಸೂಕ್ತ ಮರುನೆಲೆ ವ್ಯವಸ್ಥೆ ಕಲ್ಪಿಸಲಾಗುವುದು. ತೆರವು ಕಾರ್ಯ ಪೂರ್ಣಗೊಂಡ ಬಳಿಕ ನಿಯಮಾನುಸಾರ ಅದೇ ಸ್ಥಳದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R