ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳ ವಿಸ್ತರಣೆಯ ಮಹತ್ವದ ಪ್ರಸ್ತಾವನೆಗಳ ಪರಿಶೀಲನೆ
ನವದೆಹಲಿ, 22 ಆಗಸ್ಟ್ (ಹಿ.ಸ.): ಆ್ಯಂಕರ್:ಮಹಿಳೆಯರ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ವಿಸ್ತರಿಸಿ, ಅವುಗಳನ್ನು ಅಭಿವೃದ್ಧಿ ಆಧಾರಿತ ವ್ಯವಹಾರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಶಕ್ತ ಸಮಿತಿ ಹಲವು ಮಹತ್ವದ ಪ್ರಸ್ತಾವನೆಗಳನ್ನು ಪರಿಶೀಲಿಸಿದೆ. ದೀನದಯಾಳ ಅಂತ್ಯೋದಯ
ग्रामीण विकास सचिव रोहित कंसल के साथ अन्य लोग मौजूद।


ನವದೆಹಲಿ, 22 ಆಗಸ್ಟ್ (ಹಿ.ಸ.):

ಆ್ಯಂಕರ್:ಮಹಿಳೆಯರ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ವಿಸ್ತರಿಸಿ, ಅವುಗಳನ್ನು ಅಭಿವೃದ್ಧಿ ಆಧಾರಿತ ವ್ಯವಹಾರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಶಕ್ತ ಸಮಿತಿ ಹಲವು ಮಹತ್ವದ ಪ್ರಸ್ತಾವನೆಗಳನ್ನು ಪರಿಶೀಲಿಸಿದೆ.

ದೀನದಯಾಳ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಕೃಷಿಯೇತರ ಜೀವನೋಪಾಯ ಘಟಕದಡಿ ನಡೆದ ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ರೋಹಿತ್ ಕನ್ಸಲ್ ವಹಿಸಿದ್ದರು. ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಮೂಲಕ ದೇಶದಲ್ಲಿ 6 ಕೋಟಿ ‘ಲಖಪತಿ ದೀದಿಯರನ್ನು’ ರೂಪಿಸುವ ರಾಷ್ಟ್ರೀಯ ಗುರಿಗೆ ವೇಗ ನೀಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.

ಸಭೆಯಲ್ಲಿ ಜಂಟಿ ಕಾರ್ಯದರ್ಶಿಗಳಾದ ಅಮಿತ್ ಶುಕ್ಲಾ ಮತ್ತು ಸ್ವಾತಿ ಶರ್ಮಾ ಸೇರಿದಂತೆ ವಿವಿಧ ರಾಜ್ಯಗಳ ಹಿರಿಯ ಅಧಿಕಾರಿಗಳು ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande