1984ರ ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ವಾಗ್ದಾಳಿ
ನವದೆಹಲಿ, 21 ಆಗಸ್ಟ್ (ಹಿ.ಸ.): ಆ್ಯಂಕರ್:1984ರ ಸಿಖ್ ವಿರೋಧಿ ದಂಗೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ಸಜ್ಜನ್ ಕುಮಾರ್ ಅವರನ್ನು “ಮಾದ
आरपी सिंह फाइल फोटो


ನವದೆಹಲಿ, 21 ಆಗಸ್ಟ್ (ಹಿ.ಸ.):

ಆ್ಯಂಕರ್:1984ರ ಸಿಖ್ ವಿರೋಧಿ ದಂಗೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ಸಜ್ಜನ್ ಕುಮಾರ್ ಅವರನ್ನು “ಮಾದರಿ ವ್ಯಕ್ತಿ” ಹಾಗೂ “ತುಂಬಲಾರದ ನಷ್ಟ” ಎಂದು ಬಣ್ಣಿಸಿರುವುದನ್ನು ಪ್ರಶ್ನಿಸಿದ್ದಾರೆ. 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅಪರಾಧಿ ಎಂದು ತೀರ್ಪುಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ದಂಗೆ ಪ್ರಕರಣದಲ್ಲಿ ಅಪರಾಧಿಯಾಗಿರುವ ವ್ಯಕ್ತಿಯನ್ನು ಕಾಂಗ್ರೆಸ್ ನಾಯಕರು ವೈಭವೀಕರಣ ಮಾಡುತ್ತಿರುವುದು 1984ರ ಘಟನೆಗಳ ಬಗ್ಗೆ ಪಕ್ಷದ ನಿಲುವನ್ನು ತೋರಿಸುತ್ತದೆ ಎಂದು ಆರ್.ಪಿ. ಸಿಂಗ್ ಆರೋಪಿಸಿದ್ದಾರೆ. ತಪ್ಪಿತಸ್ಥರನ್ನು ಗೌರವಿಸಿ, ಸಂತ್ರಸ್ತರನ್ನು ಮರೆತರೆ ಕಾಂಗ್ರೆಸ್‌ನ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ ಎಂದಿದ್ದಾರೆ.

1984ರ ಘಟನೆಗಳ ಸಂದರ್ಭದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೀಡಿದ್ದ “ದೊಡ್ಡ ಮರ ಬಿದ್ದಾಗ ಭೂಮಿ ಸ್ವಲ್ಪ ಅಲುಗಾಡುತ್ತದೆ” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ಅವರು ಉಲ್ಲೇಖಿಸಿದ್ದಾರೆ. ದೆಹಲಿಯಲ್ಲಿ ಸುಮಾರು 3,000 ಸಿಖ್ಖರು ಹತ್ಯೆಯಾದ ಘಟನೆ ಸಂತ್ರಸ್ತ ಕುಟುಂಬಗಳಿಗೆ ಕೇವಲ ಭೂಮಿ ಸ್ವಲ್ಪ ಅಲುಗಾಡಿದ ಘಟನೆ ಆಗಿರಲಿಲ್ಲ, ಇಡೀ ಬದುಕನ್ನೇ ನಾಶಗೊಳಿಸಿದ ದುರಂತವಾಗಿತ್ತು ಎಂದು ಹೇಳಿದ್ದಾರೆ.

1984ರ ದಂಗೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರು ಆ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಕೀಯ ಹೇಳಿಕೆಗಳ ಮೂಲಕ ಸಂತ್ರಸ್ತರ ನೋವು ಹಾಗೂ ಆ ದುರಂತದ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಆರ್.ಪಿ. ಸಿಂಗ್ ಹೇಳಿದ್ದಾರೆ.

ದಂಗೆಗೆ ಸಂಬಂಧಿಸಿದಂತೆ ಅಪರಾಧಿಗಳೆಂದು ತೀರ್ಪುಗೊಂಡವರನ್ನು ವೈಭವೀಕರಣ ಮಾಡುವುದು ಸಂತ್ರಸ್ತರ ಗಾಯದ ಮೇಲೆ ಉಪ್ಪು ಸವರಿದಂತೆ ಎಂದು ಅವರು ಆರೋಪಿಸಿದ್ದಾರೆ. 1984ರ ಘಟನೆಗಳನ್ನು ಸಿಖ್ ಸಮುದಾಯ ಎಂದಿಗೂ ಮರೆಯುವುದಿಲ್ಲ ಎಂದೂ ಬಿಜೆಪಿ ವಕ್ತಾರ ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande