ನೃಪೇಂದ್ರ ಮಿಶ್ರಾ ನಿರ್ಧಾರಗಳೇ ರಾಮಮಂದಿರ ನಿರ್ಮಾಣದಲ್ಲಿ ಪ್ರಮುಖ: ಚಂಪತ್ ರಾಯ್
ಅಯೋಧ್ಯೆ, 21 ಆಗಸ್ಟ್ (ಹಿ.ಸ.): ಆ್ಯಂಕರ್: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು 33 ಅಂಶಗಳನ್ನು ಒಳಗೊಂಡ ಒಂಬತ್ತು ಪುಟಗಳ ಪತ್ರವನ್ನು ಬಿಡುಗಡೆ ಮಾಡಿದ್ದು, ರಾಮಮಂದಿರ ನಿರ್ಮಾಣದಲ್ಲಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರ ನಿ
चम्पत राय और चिट्ठी


ಅಯೋಧ್ಯೆ, 21 ಆಗಸ್ಟ್ (ಹಿ.ಸ.):

ಆ್ಯಂಕರ್:

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು 33 ಅಂಶಗಳನ್ನು ಒಳಗೊಂಡ ಒಂಬತ್ತು ಪುಟಗಳ ಪತ್ರವನ್ನು ಬಿಡುಗಡೆ ಮಾಡಿದ್ದು, ರಾಮಮಂದಿರ ನಿರ್ಮಾಣದಲ್ಲಿ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರ ನಿರ್ಧಾರಗಳು ಪ್ರಮುಖವಾಗಿದ್ದವು ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ನಿರ್ಧಾರಗಳನ್ನು ನೃಪೇಂದ್ರ ಮಿಶ್ರಾ ಕೈಗೊಂಡಿದ್ದರು. ಅವರ ಸಲಹೆಯ ಆಧಾರದ ಮೇಲೆಯೇ ಎಲ್‌ ಆ್ಯಂಡ್‌ ಟಿ ಸಂಸ್ಥೆಯನ್ನು ದೇವಾಲಯ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿತ್ತು. ಕಟ್ಟಡಗಳ ವಿನ್ಯಾಸಕ್ಕಾಗಿ ನೋಯ್ಡಾದ ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಜಯ ಕಾಕತೀಕರ್ ಅವರನ್ನು ಕೂಡ ಮಿಶ್ರಾ ಆಯ್ಕೆ ಮಾಡಿದ್ದರು ಎಂದು ಚಂಪತ್ ರಾಯ್ ತಿಳಿಸಿದ್ದಾರೆ.

ಕೊರೊನಾ ಅವಧಿಯಲ್ಲೇ 2020ರ ಜೂನ್‌ನಲ್ಲಿ ಆರಂಭಗೊಂಡಿದ್ದ ಕಲ್ಲಿನ ಬೃಹತ್ ರಾಮಮಂದಿರ ನಿರ್ಮಾಣ ಕಾರ್ಯ 2026ರ ಜೂನ್ ವೇಳೆಗೆ ಪೂರ್ಣಗೊಂಡು ಸಮಾಜಕ್ಕೆ ಸಮರ್ಪಣೆಯಾಗಲು ನೃಪೇಂದ್ರ ಮಿಶ್ರಾ ಅವರ ಪ್ರಯತ್ನ ಪ್ರಮುಖ ಕಾರಣ ಎಂದು ಅವರು ಶ್ಲಾಘಿಸಿದ್ದಾರೆ. ನಿರ್ಮಾಣದಲ್ಲಿ ಎದುರಾದ ಸಮಸ್ಯೆಗಳಿಗೆ ದೇಶದ ತಜ್ಞರನ್ನು ಅಯೋಧ್ಯೆಗೆ ಕರೆಸಿ ಅವರ ಸಲಹೆಯೊಂದಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಎನ್‌ಬಿಸಿಸಿ ಮಾಜಿ ಅಧ್ಯಕ್ಷ ಹಾಗೂ ಸಿವಿಲ್ ಎಂಜಿನಿಯರ್ ಅನೂಪ್ ಮಿತ್ತಲ್ ಅವರು ನಿರ್ಮಾಣ ಸಮಿತಿಯ ಸದಸ್ಯರಾಗಿದ್ದು, ನೃಪೇಂದ್ರ ಮಿಶ್ರಾ ಅವರಿಗೆ ಎಂಜಿನಿಯರಿಂಗ್ ವಿಷಯಗಳಲ್ಲಿ ಸಲಹೆ ನೀಡುತ್ತಿದ್ದರು. ಸಭೆಗಳ ವರದಿ ಸಿದ್ಧಪಡಿಸುವುದು ಸೇರಿದಂತೆ ಹಲವು ಲಿಖಿತ ಕಾರ್ಯಗಳನ್ನು ಅವರು ನಿರ್ವಹಿಸುತ್ತಿದ್ದರು ಎಂದು ಚಂಪತ್ ರಾಯ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ರಾಮಕಥಾ ವಸ್ತುಸಂಗ್ರಹಾಲಯವನ್ನು 30 ವರ್ಷಗಳ ಅವಧಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಗುತ್ತಿಗೆಗೆ ಪಡೆಯಲಾಗಿದೆ. ಇದರ ಸಂಪೂರ್ಣ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿದ್ದು, 20 ಗ್ಯಾಲರಿಗಳ ರೂಪುರೇಷೆ ಸಿದ್ಧಪಡಿಸಲಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯದಲ್ಲಿ ತೊಡಗಿಕೊಂಡಿವೆ. ವಸ್ತುಸಂಗ್ರಹಾಲಯವು 2027ರ ಡಿಸೆಂಬರ್ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande