
ನವದೆಹಲಿ, 20 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಸಂಸ್ಕೃತದ ಪ್ರಸಿದ್ಧ ಗ್ರಂಥ ಕಥಾಸರಿತ್ಸಾಗರದ ಶ್ಲೋಕವನ್ನು ಹಂಚಿಕೊಳ್ಳುವ ಮೂಲಕ ಕಠಿಣ ಪರಿಸ್ಥಿತಿಗಳಲ್ಲೂ ಧೈರ್ಯ ಹಾಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ಸಂದೇಶ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ ಮಹಾಕವಿ ಸೋಮದೇವ ಭಟ್ಟ ರಚಿಸಿದ ಶ್ಲೋಕವನ್ನು ಹಂಚಿಕೊಂಡಿದ್ದಾರೆ.
“ಆಪತ್ಕಾಲೇ ಚ ಕಷ್ಟೇಽಪಿ ನೋತ್ಸಾಹಸ್ತ್ಯಜ್ಯತೇ ಬುಧೈಃ। ಇತಿ ಪ್ರಬೋಧಿತಸ್ತೇನ ಕಥಂಚಿದ್ ದೃಢಬುದ್ಧಿನಾ।।“
ಸ್ಥಿರ ಹಾಗೂ ದೃಢ ಬುದ್ಧಿಯುಳ್ಳ ಜ್ಞಾನಿಗಳು ಸಂಕಷ್ಟ ಮತ್ತು ಕಠಿಣ ಪರಿಸ್ಥಿತಿಗಳು ಎದುರಾದಾಗಲೂ ತಮ್ಮ ಉತ್ಸಾಹವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂಬುದು ಈ ಶ್ಲೋಕದ ಅರ್ಥವಾಗಿದೆ.
ಕಷ್ಟದ ಸಂದರ್ಭಗಳಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಈ ಮೂಲಕ ಸಾರಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.