
ನವದೆಹಲಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಎಂದಿನಂತೆ ತಮ್ಮ ಎಕ್ಸ್ ಖಾತೆಯಲ್ಲಿ ಸಂಸ್ಕೃತದ ಸುಭಾಷಿತವನ್ನು ಹಂಚಿಕೊಂಡು, ಜನರು ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಇತರ ಜೀವಿಗಳ ಸಾಮರ್ಥ್ಯಕ್ಕೆ ತಕ್ಕಂತೆ ನೆರವು ನೀಡುವ ಮೂಲಕ ಮಾನವ ಜೀವನವನ್ನು ಸಾರ್ಥಕಗೊಳಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಂದರ್ಭದಲ್ಲಿ ಅವರು ಶ್ರೀಮದ್ಭಾಗವತ ಮಹಾಪುರಾಣದ 10.22.35ನೇ ಶ್ಲೋಕವನ್ನು ಹಂಚಿಕೊಂಡಿದ್ದಾರೆ.
“ಎತಾವಜ್ಜನ್ಮಸಾಫಲ್ಯಂ ದೇಹಿನಾಮಿಹ ದೇಹಿಷು। ಪ್ರಾಣೈರರ್ಥೈರ್ಯ ವಾಚಾ ಶ್ರೇಯ ಏವಾಚರೇತ್ಸದಾ॥” ಎಂಬ ಶ್ಲೋಕವನ್ನು ಉಲ್ಲೇಖಿಸಿರುವ ಪ್ರಧಾನಿ, ಮನುಷ್ಯನ ಜನ್ಮದ ಪೂರ್ಣ ಸಾರ್ಥಕತೆ ಇತರ ಜೀವಿಗಳ ಒಳಿತಿಗಾಗಿ ಕಾರ್ಯನಿರ್ವಹಿಸುವುದರಲ್ಲಿ ಅಡಗಿದೆ ಎಂದು ವಿವರಿಸಿದ್ದಾರೆ.
ಮನುಷ್ಯರು ತಮ್ಮ ದೈಹಿಕ ಸಾಮರ್ಥ್ಯ, ಸಂಪತ್ತು, ಬುದ್ಧಿವಂತಿಕೆ ಹಾಗೂ ಮಾತಿನ ಮೂಲಕ ಸದಾ ಪರೋಪಕಾರಿ ಮತ್ತು ಕಲ್ಯಾಣಕಾರಿ ಕಾರ್ಯಗಳನ್ನು ಮಾಡಬೇಕು ಎಂಬ ಸಂದೇಶವನ್ನು ಈ ಶ್ಲೋಕ ಸಾರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.