ಸಿದ್ಧಾಂತಗಳೊಂದಿಗೆ ಯಾವುದೇ ರಾಜಿ ಬೇಡ:ಪ್ರಧಾನಿ ಮೋದಿ
ನವದೆಹಲಿ, 18ಆಗಸ್ಟ್ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ತಮ್ಮ ಎಂದಿನಂತೆ ಪ್ರಸಿದ್ಧ ಸಂಸ್ಕೃತ ಸುಭಾಷಿತವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪ್ರತಿಯೊಬ್ಬರೂ ಆತ್ಮಗೌರವ, ಸ್ವಾಭಿಮಾನ ಮತ್ತು ಧೈರ್ಯದಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಮಹಾಭಾರತದ ಉ
प्रधानमंत्री नरेन्द्र मोदी की एक्स पोस्ट।


ನವದೆಹಲಿ, 18ಆಗಸ್ಟ್ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ತಮ್ಮ ಎಂದಿನಂತೆ ಪ್ರಸಿದ್ಧ ಸಂಸ್ಕೃತ ಸುಭಾಷಿತವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪ್ರತಿಯೊಬ್ಬರೂ ಆತ್ಮಗೌರವ, ಸ್ವಾಭಿಮಾನ ಮತ್ತು ಧೈರ್ಯದಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದ್ದಾರೆ.

ಮಹಾಭಾರತದ ಉದ್ಯೋಗ ಪರ್ವದಿಂದ ಆಯ್ದ “ಉದ್ಯಚ್ಛೇದೇವ ನ ನಮೇದುದ್ಯಮೋ ಹ್ಯೇವ ಪೌರುಷಮ್। ಅಪ್ಯಪರ್ವಣಿ ಭಜ್ಯೇತ ನ ನಮತ್ವೇವ ಕಸ್ಯಚಿತ್॥” ಎಂಬ ಶ್ಲೋಕವನ್ನು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಶ್ಲೋಕದ ಮೂಲಕ ಯಾವುದೇ ಪರಿಸ್ಥಿತಿಯಲ್ಲಿಯೂ ವ್ಯಕ್ತಿ ತನ್ನ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ನಿಜವಾದ ಪುರುಷಾರ್ಥ ಮತ್ತು ಪರಾಕ್ರಮವು ಕಷ್ಟದ ಸಂದರ್ಭಗಳಲ್ಲಿಯೂ ಧೈರ್ಯದಿಂದ ನಿಂತು, ತನ್ನ ತತ್ವ, ಮೌಲ್ಯ ಮತ್ತು ಆದರ್ಶಗಳೊಂದಿಗೆ ರಾಜಿ ಮಾಡಿಕೊಳ್ಳದಿರುವುದರಲ್ಲಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.

ಸತ್ಯ, ಧೈರ್ಯ ಹಾಗೂ ಆತ್ಮಗೌರವದೊಂದಿಗೆ ಆದರ್ಶಗಳ ಮೇಲೆ ದೃಢವಾಗಿ ನಿಲ್ಲುವುದೇ ಶ್ರೇಷ್ಠ ಜೀವನದ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande