
ನವದೆಹಲಿ, 17 ಆಗಸ್ಟ್ (ಹಿ.ಸ.):
ಆ್ಯಂಕರ್:
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ನೂತನ ತಂಡದಲ್ಲಿ ಸಂಘಟನಾ ಅನುಭವ, ಉತ್ಸಾಹ ಹಾಗೂ ತಳಮಟ್ಟದ ಸಂಪರ್ಕದ ಸಮನ್ವಯವಿದೆ ಎಂದು ಹೇಳಿದ್ದಾರೆ.
ನೂತನ ತಂಡವು ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಜನಸೇವೆಗೆ ವಿಶೇಷ ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಎಲ್ಲ ನೂತನ ಪದಾಧಿಕಾರಿಗಳು ಹಾಗೂ ನಾಯಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಸೋಮವಾರ ನೂತನ ತಂಡವನ್ನು ಘೋಷಿಸಿದ್ದರು. ವಸುಂಧರಾ ರಾಜೇ ಸಿಂಧಿಯಾ ಹಾಗೂ ರಾಮ್ ಮಾಧವ್ ಸೇರಿದಂತೆ 13 ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ, ಸ್ಮೃತಿ ಇರಾನಿ ಹಾಗೂ ಹರೀಶ್ ದ್ವಿವೇದಿ ಸೇರಿದಂತೆ ಎಂಟು ಮಂದಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ರಾಷ್ಟ್ರೀಯ ಖಜಾಂಚಿ ಜವಾಬ್ದಾರಿ ನೀಡಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.