
ನವದೆಹಲಿ, 17 ಆಗಸ್ಟ್ (ಹಿ.ಸ.):
ಆ್ಯಂಕರ್:ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಸೋಮವಾರ ಪಕ್ಷದ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಘೋಷಿಸಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಹಿರಿಯ ನಾಯಕ ರಾಮ್ ಮಾಧವ್ ಸೇರಿದಂತೆ 13 ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ವಿನೋದ್ ತಾವಡೆ, ಸುನೀಲ್ ಬನ್ಸಲ್, ಬಿಪ್ಲಬ್ ದೇವ್, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಹಾಗೂ ಸಂಜಯ್ ಭಾಟಿಯಾ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಅವರಿಗೆ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.
ವಸುಂಧರಾ ರಾಜೇ, ತೀರ್ಥ್ ಸಿಂಗ್ ರಾವತ್, ರಾಮ್ ಮಾಧವ್, ಬೈಜಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ಮಾ.ನಾಗರಾಜ,ರೇಖಾ ವರ್ಮಾ ಸೇರಿದಂತೆ 13 ಮಂದಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಒಟ್ಟು ಏಳು ರಾಜ್ಯಗಳಿಂದ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದ್ದು, ಉತ್ತರ ಪ್ರದೇಶದಿಂದ ಇಬ್ಬರು ಸ್ಥಾನ ಪಡೆದಿದ್ದಾರೆ.
ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಭೋಲಾ ಸಿಂಗ್, ಪ್ರದೀಪ್ ವರ್ಮಾ, ಸಂದೀಪ್ ಪಾಠಕ್, ಅನಿಲ್ ಆಂಟನಿ ಸೇರಿದಂತೆ 16 ಮಂದಿಗೆ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ತರುಣ್ ಚುಗ್ ಅವರಿಗೆ ರಾಷ್ಟ್ರೀಯ ಕಚೇರಿ ಉಸ್ತುವಾರಿ, ಮಹೇಂದ್ರ ಪಾಂಡೆ ಅವರಿಗೆ ರಾಷ್ಟ್ರೀಯ ಕಚೇರಿ ಜವಾಬ್ದಾರಿ ವಹಿಸಲಾಗಿದೆ.
ಸಂಬಿತ್ ಪಾತ್ರಾ ಅವರಿಗೆ ಈಶಾನ್ಯ ರಾಜ್ಯಗಳ ಸಂಯೋಜಕ ಜವಾಬ್ದಾರಿ ನೀಡಲಾಗಿದೆ. ವಿವಿಧ ಮೋರ್ಚಾಗಳಿಗೂ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯುವ ಮೋರ್ಚಾಕ್ಕೆ ಹೇಮಾಂಗ್ ಜೋಶಿ, ಮಹಿಳಾ ಮೋರ್ಚಾಕ್ಕೆ ರೂಪಕುಮಾರಿ ಚೌಧರಿ, ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಅಮರ್‌ಪಾಲ್ ಮೌರ್ಯ ಹಾಗೂ ರೈತ ಮೋರ್ಚಾಕ್ಕೆ ಬನ್ಸೀಲಾಲ್ ಗುರ್ಜರ್ ಅವರನ್ನು ನೇಮಿಸಲಾಗಿದೆ.
ಅನಿಲ್ ಬಲುನಿ ಅವರನ್ನು ಮತ್ತೊಮ್ಮೆ ಮಾಧ್ಯಮ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ದೀಪಕ್ ಮಸ್ಕೆ ಅವರಿಗೆ ಸಾಮಾಜಿಕ ಮಾಧ್ಯಮ ಸಂಯೋಜಕರ ಜವಾಬ್ದಾರಿ ನೀಡಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.