ವಿಎಸ್ಕೆಯು ಸಿಂಡಿಕೇಟ್ ಸದಸ್ಯರಾಗಿ ಎಸ್.ಆರ್. ಶರಣ್ಕುಮಾರ್
ಬಳ್ಳಾರಿ, 05 ಜುಲೈ (ಹಿ.ಸ.) ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಇಂಜಿನಿಯರಿಂಗ್ ಪದವೀಧರ ಎಸ್.ಆರ್. ಶರಣ್ ಕುಮಾರ್ ಅವರು ನೇಮಕಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿಂಧಿಗೇರಿ ಗ್ರಾಮದ ಇವರು 2008ರಲ್ಲಿ ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಬ
ವಿಎಸ್ಕೆಯು ಸಿಂಡಿಕೇಟ್ ಸದಸ್ಯರಾಗಿ ಎಸ್.ಆರ್. ಶರಣ್ಕುಮಾರ್


ವಿಎಸ್ಕೆಯು ಸಿಂಡಿಕೇಟ್ ಸದಸ್ಯರಾಗಿ ಎಸ್.ಆರ್. ಶರಣ್ಕುಮಾರ್


ಬಳ್ಳಾರಿ, 05 ಜುಲೈ (ಹಿ.ಸ.)

ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಇಂಜಿನಿಯರಿಂಗ್ ಪದವೀಧರ ಎಸ್.ಆರ್. ಶರಣ್ ಕುಮಾರ್ ಅವರು ನೇಮಕಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿಂಧಿಗೇರಿ ಗ್ರಾಮದ ಇವರು 2008ರಲ್ಲಿ ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರಿನಲ್ಲಿ ಎಂಸಿಎ ಪದವಿಯನ್ನು ಪಡೆದು ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಕಾಲೇಜಿನಲ್ಲಿ ಗಣಕಯಂತ್ರದ ಉಪನ್ಯಾಸಕರಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ವಿಶ್ವವಿದ್ಯಾಲಯದ ಎನ್ಎಸ್ಎಸ್ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande