ಕೊಪ್ಪಳ: ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ
ಕೊಪ್ಪಳ, 05 ಜುಲೈ (ಹಿ.ಸ.) ಆ್ಯಂಕರ್ : 2026-27ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯಡಿಯಲ್ಲಿ ಬೆಳೆ ಸಮೀಕ್ಷೆ ರೈತರ ಆ್ಯಪ್ ಮತ್ತು ಸಿ.ಆರ್. ಆ್ಯಪ್ ಬಿಡುಗಡೆಯಾಗಿದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 2026-27ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಯೋಜನೆಯಡಿ ರೈತರು ತಮ್ಮ ಜಮೀನ
ಕೊಪ್ಪಳ: ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ


ಕೊಪ್ಪಳ, 05 ಜುಲೈ (ಹಿ.ಸ.)

ಆ್ಯಂಕರ್ : 2026-27ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯಡಿಯಲ್ಲಿ ಬೆಳೆ ಸಮೀಕ್ಷೆ ರೈತರ ಆ್ಯಪ್ ಮತ್ತು ಸಿ.ಆರ್. ಆ್ಯಪ್ ಬಿಡುಗಡೆಯಾಗಿದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

2026-27ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಾವೇ ಬೆಳೆ ಸಮೀಕ್ಷೆಯಡಿಯಲ್ಲಿ ತಾವೇ ಸ್ವತಃ ತಾವೇ ದಾಖಲಿಸಬಹುದು. Farmer App for Kharif 2026 ಹೆಸರಿನ ಮೊಬೈಲ್ ಅಪ್ಲೇಕ್ಶನ ಡೌನಲೋಡ್ ಮಾಡಿಕೊಳ್ಳಬಹುದು.

ಈ ಬೆಳೆ ಸಮೀಕ್ಷೆ ಮಾಹಿತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮಾ ಯೋಜನೆ, ಬೆಳೆಹಾನಿಗೆ ಪರಿಹಾರ ವಿತರಿಸಲು, ಬೆಳೆ ಕಟಾವು ಕೈಗೊಳ್ಳಲು, ಬೆಳೆ ವಿಸ್ತೀರ್ಣ ವರದಿ ಕಾರ್ಯ. ಪಹಣೆಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಫಲಾನುಭವಿಗಳ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲು ಬೆಳೆ ಸಮೀಕ್ಷೆ ಮಾಹಿತಿ ಅವಶ್ಯಕವಾಗಿರುತ್ತದೆ.

ಆದ್ದರಿಂದ ರೈತರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳಗಳ ವಿವರಗಳನ್ನು ಸ್ವತಃ ತಾವೇ ದಾಖಲಿಸಲು ಈ ಮೂಲಕ ಸೂಚಿಸಿದೆ.

ಈ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಗಳಲ್ಲಿ ಸರ್ವೆ ಕಾರ್ಯನಿರ್ವಹಿಸಲು ಖಾಸಗಿ ನಿವಾಸಿಗಳನ್ನು ನಿಯೋಜಿಸಲಾಗಿರುತ್ತದೆ. ರೈತರು ಸದರಿ ಖಾಸಗಿ ನಿವಾಸಿಗಳ ಜೊತೆಗೆ ಪಿ.ಆರ್. ಆ್ಯಪ್ ಮೂಲಕ ತಮ್ಮ ಜಮೀನಿನ ಬೆಳೆಗಳನ್ನು ಬೆಳೆ ಸಮೀಕ್ಷೆಯಲ್ಲಿ ದಾಖಲಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande