ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಲ್.ಶ್ರೀನಿವಾಸ್ ಆಯ್ಕೆ
ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಎಲ್.ಶ್ರೀನಿವಾಸ್ ಆಯ್ಕೆ
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಕೋಲಾರ ಜಿಲ್ಲಾ ಸಂಘದ  ಪ್ರಧಾನ ಕಾರ್ಯದರ್ಶಿಯಾಗಿ ಎಲ್. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.


ಕೋಲಾರ ಜುಲೈ ೪ (ಹಿ.ಸ):

ಆ್ಯಂಕರ್ :ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ನೂತನ ಪ್ರಧಾನ ಕಾರ್ಯದರ್ಶಿಯಾಗಿ ವಕ್ಕಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಲ್.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಹೊರವಲಯದ ಆರಾಧ್ಯ ಗ್ರಾಂಡ್ನಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ನಡೆದಿದ್ದು, ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ರವರು ಈ ಆಯ್ಕೆಯನ್ನು ಪ್ರಕಟಿಸಿದರು.

ಮುಖ್ಯ ಶಿಕ್ಷಕರು ತಮ್ಮ ಕೆಲಸ ಕಾರ್ಯಗಳನ್ನು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ ಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದು, ಮೊಟ್ಟೆಧಾರಣೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಾಗಿ ಮಾರುಕಟ್ಟೆ ಬೆಲೆ ಆಗಿರುವುದರಿಂದ ಮುಖ್ಯೋಪಾಧ್ಯಾಯರು ಈ ಹಣವನ್ನು ತಮ್ಮ ಜೇಬಿ ನಿಂದ ಬರಿಸುವ ಸ್ಥಿತಿ ಉದ್ಭವವಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಾದ್ಯಂತ ಆಹಾರ ಧಾನ್ಯಗಳ ಪರಿಕರಗಳನ್ನು ಶಾಲೆಯ ಬಾಗಿಲಿಗೆ ತಲುಪಿಸಲು, ಮಧ್ಯಾಹ್ನದ ಬಿಸಿ ಊಟದ ಪರಿವರ್ತನಾ ವೆಚ್ಚವನ್ನು ಪರಿಷ್ಕರಿಸಲು ಹಾಗೂ ಕಾಮ್ಸ್ ನಲ್ಲಿ ಇನ್ನು ಕೆಲವು ಶಾಲೆಗಳು ಹಾಜರಾತಿ ಪ್ರಕ್ರಿಯೆ ಗೊಂದಲದಲ್ಲಿ ಇದ್ದು ಇದನ್ನು ಸರಿಪಡಿಸಲು ಇಲಾಖೆ ಪ್ರಯತ್ನಿಸಬೇಕು ಎಂದು ಮನವಿ ಮಾಡಿದ ಅವರು, ಶಾಲಾ ಸಮಯವನ್ನು ಬೆಳಿಗ್ಗೆ ೧೦ ರಿಂದ ಸಂಜೆ ೪:೩೦ವರೆಗೆ ಎಂಬುದಾಗಿ ನಿಗದಿಪಡಿಸಿ ಶಿಕ್ಷಕರಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.

ಕೆಂಬೋಡಿಯ ಪಿ.ಎಂ.ಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ ನಾರಾಯಣಸ್ವಾಮಿ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸುವುದನ್ನು ಗುರುತಿಸಿ ಸಮಿತಿಯು ಆತ್ಮೀಯವಾಗಿ ಸನ್ಮಾನಿಸಿತು

ಸಭೆಯಲ್ಲಿ ಸಂಘದ ಕೋಶಾಧ್ಯಕ್ಷರಾದ ಕೆ.ವಿ ಜಗನ್ನಾಥ್ ತಾಲೂಕು ಅಧ್ಯಕ್ಷರಾದ ಕೆ.ಶಿವರಾಜ್ ಮುಳಬಾಗಿಲು ಶಿವಣ್ಣ, ಕೆಜಿಎಫ್ ಅಧ್ಯಕ್ಷರಾದ ಶ್ರೀನಿವಾಸ್, ಬಂಗಾರಪೇಟೆಯ ಮುನಿ ನಾರಾಯಣಪ್ಪ, ಮುಳಬಾಗಿಲಿನ ಎನ್.ಚಂದ್ರ, ಉಪಾಧ್ಯಕ್ಷರಾದ ಪದ್ಮಮ್ಮ, ತಾಲೂಕು ಕಾರ್ಯದರ್ಶಿ ಕೆ ಮನಿಸ್ವಾಮಿ, ಕೋಶ ಅಧ್ಯಕ್ಷರಾದ ಚಂದ್ರಶೇಖರ್ ಮೊದಲಿಯಾರ್, ರಾಮಸಾಗರ ಶ್ರೀನಿವಾಸ್ ದವನೇಶ್, ಕೃಷ್ಣಪ್ಪ ರಾಜೇಶ್ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande