
ಬಳ್ಳಾರಿ, 05 ಜುಲೈ (ಹಿ.ಸ.)
ಆ್ಯಂಕರ್ : ವಿದ್ಯುತ್ ಸರಬರಾಜು ಕ್ಷೇತ್ರವನ್ನು ಖಾಸಗಿಕರಣ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸುವುದಾಗಿ ಸ್ಪಷ್ಟವಾಗಿ ಹೇಳಿ, ಟಾಟಾ ಪವರ್ ಸಂಸ್ಥೆಯು ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಂಗಭದ್ರ ರೈತ ಸಂಘವು ಅಭಿನಂದನೆಗಳನ್ನು ಸಲ್ಲಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮಗೌಡ ಅವರು, ಕರ್ನಾಟಕ ರಾಜ್ಯಾದ್ಯಂತ ಬಾವಿಗಳು, ಬೋರ್ವೆಲ್ಗಳು, ಕೆರೆಗಳು, ಹಳ್ಳ - ಹೊಳೆ, ನದಿಗಳು ಮತ್ತು ಏತ ನೀರಾವರಿಗಳ ಮೂಲಕ 10 ಎಚ್ಪಿ ವರೆಗೆ ಸರ್ಕಾರ ರೈತರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ವಿದ್ಯುತ್ ಸರಬರಾಜು ಕ್ಷೇತ್ರವನ್ನು ಖಾಸಗೀಕರಣ ಗೊಳಿಸಿದ್ದಲ್ಲಿ ಕೃಷಿ ಕ್ಷೇತ್ರ ನಲುಗುತ್ತಿತ್ತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದ್ಯುತ್ ಸರಬರಾಜು ಕ್ಷೇತ್ರದ ಖಾಸಗೀಕರಣ ಪ್ರಸ್ತಾವನೆ ರದ್ದು ಮಾಡುವುದಾಗಿ ಸ್ಪಷ್ಟಪಡಿಸಿದ ನಂತರ ಅವರಿಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ, ನಾಡಿನ ಸಮಸ್ತ ರೈತರ ಪರವಾಗಿ ಅಭಿನಂದನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್