ಆದರ್ಶ ವಿದ್ಯಾಲಯ: 7, 8 ಮತ್ತು 9ನೇ ಪರೀಕ್ಷೆ ಫಲಿತಾಂಶ ; ಜುಲೈ 6, 7 ಕ್ಕೆ ದಾಖಲಾತಿ
ಬಳ್ಳಾರಿ, 04 ಜುಲೈ (ಹಿ.ಸ.) ಆ್ಯಂಕರ್: ನಗರದ ಈದ್ಗಾ ರಸ್ತೆಯ ಹಿರಿಯಾಳ್ ಕುಡಂನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ 7, 8 ಮತ್ತು 9ನೇ ತರಗತಿಗಳ ಖಾಲಿ ಸೀಟುಗಳ ಭರ್ತಿಗಾಗಿ ನಡೆಸಲಾಗಿದ್ದ ಪ್ರವೇಶ ಪರೀಕ್ಷೆಯ ಫಲಿತಾಂಶ ಹಾಗೂ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆದರ್ಶ ವಿದ್ಯಾಲಯ: 7, 8 ಮತ್ತು 9ನೇ ಪರೀಕ್ಷೆ ಫಲಿತಾಂಶ ; ಜುಲೈ 6, 7 ಕ್ಕೆ ದಾಖಲಾತಿ


ಬಳ್ಳಾರಿ, 04 ಜುಲೈ (ಹಿ.ಸ.)

ಆ್ಯಂಕರ್: ನಗರದ ಈದ್ಗಾ ರಸ್ತೆಯ ಹಿರಿಯಾಳ್ ಕುಡಂನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ 7, 8 ಮತ್ತು 9ನೇ ತರಗತಿಗಳ ಖಾಲಿ ಸೀಟುಗಳ ಭರ್ತಿಗಾಗಿ ನಡೆಸಲಾಗಿದ್ದ ಪ್ರವೇಶ ಪರೀಕ್ಷೆಯ ಫಲಿತಾಂಶ ಹಾಗೂ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕಳೆದ ಜೂನ್ 23 ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಶಾಲಾ ಪ್ರವೇಶಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಾರ್ವಜನಿಕರ ಹಾಗೂ ಪೋಷಕರ ಮಾಹಿತಿಗಾಗಿ ವಿದ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಶಾಲೆಯ ಮುಖ್ಯಗುರುಗಳು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಅಧಿಕೃತ ದಾಖಲಾತಿ ಪ್ರಕ್ರಿಯೆಯು ಜು.06 ಮತ್ತು 07 ರಂದು ನಡೆಯಲಿದೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪೋಷಕರು ತಕ್ಷಣವೇ ಶಾಲೆಗೆ ಭೇಟಿ ನೀಡಿ ಪ್ರವೇಶದ ಕುರಿತು ಸವಿಸ್ತಾರ ಮಾಹಿತಿ ಪಡೆಯಬೇಕು.

ಮಗು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಮೂಲ ವರ್ಗಾವಣೆ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಂಡು, ನಿಗದಿಪಡಿಸಿದ ದಿನಾಂಕದೊಳಗೆ ಪ್ರವೇಶಾತಿ ಹೊಂದಬೇಕು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande