ಪಾರ್ಟ್ನರ್ ಚಿತ್ರದ ಅಮೋರಾ ಹಾಡು ಬಿಡುಗಡೆ; ಪ್ರೇಕ್ಷಕರ ಮನಸ್ಸು ಮುಟ್ಟುವ ಸಿನಿಮಾ ಮಾಡುವುದು ಗುರಿ ಎಂದ ನಟ ಅಜಯ್ ರಾವ್
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ''ಪಾರ್ಟ್ನರ್'' ಚಿತ್ರದ ಮೊದಲ ಹಾಡು ''ಅಮೋರಾ'' ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಮಾತನಾಡಿ, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯ
ಸಂದರ್ಭಿಕ ಚಿತ್ರ


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಪಾರ್ಟ್ನರ್' ಚಿತ್ರದ ಮೊದಲ ಹಾಡು 'ಅಮೋರಾ' ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಮಾತನಾಡಿ, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಸಿನಿಮಾಗಳನ್ನು ನೀಡುವುದು ತಮ್ಮ ಉದ್ದೇಶ ಎಂದು ಹೇಳಿದರು.

ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರ ಸಿನಿಮಾಗಳು ತಮ್ಮ ಮೇಲೆ ಅಪಾರ ಪ್ರಭಾವ ಬೀರಿವೆ ಎಂದು ಹೇಳಿದ ಅವರು, ಸಿನಿಮಾ ಪ್ರೇಕ್ಷಕರ ಹೃದಯವನ್ನು ಸ್ಪರ್ಶಿಸಬೇಕು, ಪ್ರೇರಣೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

'ಅಮೋರಾ' ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಇದು ದೊಡ್ಡ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ಮೊದಲಿನಿಂದಲೇ ಇತ್ತು ಎಂದು ಅಜಯ್ ರಾವ್ ತಿಳಿಸಿದರು. ಈಗ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಮೆಲೋಡಿ ಪ್ರಿಯರ ಮನಗೆದ್ದಿರುವ 'ಅಮೋರಾ' ಹಾಡಿನೊಂದಿಗೆ 'ಪಾರ್ಟ್ನರ್' ಚಿತ್ರದ ಮೇಲಿನ ನಿರೀಕ್ಷೆಯೂ ಹೆಚ್ಚಿದ್ದು, ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಕ್ರೇಜ್ ಮೂಡಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande