ಸಿಡಬ್ಲ್ಯುಜಿ 2026: ಜಂಡು ಕುಮಾರ್ಗೆ ಕಂಚಿನ ಪದಕ; ಪ್ರಧಾನಿ ಮೋದಿ ಅಭಿನಂದನೆ
ನವದೆಹಲಿ, 25 ಜುಲೈ (ಹಿ.ಸ.): ಆ್ಯಂಕರ್:ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ ಭಾರತದ ಪದಕದ ಖಾತೆಯನ್ನು ತೆರೆದ ಪ್ಯಾರಾ ಪವರ್‌ಲಿಫ್ಟರ್ ಜಂಡು ಕುಮಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪುರುಷರ ಹೆವಿವೇಟ್ ಪ್ಯಾರಾ
ಜಂಡು ಕುಮಾರ


ನವದೆಹಲಿ, 25 ಜುಲೈ (ಹಿ.ಸ.):

ಆ್ಯಂಕರ್:ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ ಭಾರತದ ಪದಕದ ಖಾತೆಯನ್ನು ತೆರೆದ ಪ್ಯಾರಾ ಪವರ್‌ಲಿಫ್ಟರ್ ಜಂಡು ಕುಮಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಪದಕದ ಖಾತೆ ತೆರೆದಿರುವ ಜಂಡು ಕುಮಾರ್ ಅವರ ಸಾಧನೆ ಶ್ಲಾಘನೀಯ ಎಂದು ಹೇಳಿದ್ದಾರೆ.

ಅವರ ಈ ಸಾಧನೆ ಅಪಾರ ಶಕ್ತಿ, ಅಚಲ ಸಂಕಲ್ಪ ಮತ್ತು ವರ್ಷಗಳ ಶಿಸ್ತುಬದ್ಧ ಪರಿಶ್ರಮದ ಪ್ರತೀಕವಾಗಿದೆ. ಎಲ್ಲಾ ಸವಾಲುಗಳನ್ನು ಮೀರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿರುವ ಅವರು ಇಡೀ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದು, ಅನೇಕ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande