ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತಕ್ಕೆ ವಾಪಸ್
ನವದೆಹಲಿ, ಜುಲೈ 26(ಹಿ.ಸ.): ಆ್ಯಂಕರ್:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯುರೋಪ್‌ನ ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಹಾಗೂ ರೊಮೇನಿಯಾ ದೇಶಗಳ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾನುವಾರ ಭಾರತಕ್ಕೆ ಮರಳಿದರು. ಭಾರತದೊಂದಿಗೆ ಈ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬ
राष्ट्रपति द्रौपदी मुर्मु मोल्दोवा, उत्तरी मैसेडोनिया और रोमानिया की अपनी राजकीय यात्रा पूरी करने के बाद दिल्ली पहुंचीं। फोटो - राष्ट्रपति के आधिकारिक एक्स हैंडल से


ನವದೆಹಲಿ, ಜುಲೈ 26(ಹಿ.ಸ.):

ಆ್ಯಂಕರ್:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯುರೋಪ್‌ನ ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಹಾಗೂ ರೊಮೇನಿಯಾ ದೇಶಗಳ ಅಧಿಕೃತ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾನುವಾರ ಭಾರತಕ್ಕೆ ಮರಳಿದರು. ಭಾರತದೊಂದಿಗೆ ಈ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಪ್ರವಾಸ ಕೈಗೊಳ್ಳಲಾಗಿತ್ತು.

ರಾಷ್ಟ್ರಪತಿ ಮುರ್ಮು ಅವರು ಜುಲೈ 20ರಂದು ಮೊಲ್ಡೋವಾ ಪ್ರವಾಸ ಆರಂಭಿಸಿದ್ದರು. ಭಾರತದ ರಾಷ್ಟ್ರಪತಿಯೊಬ್ಬರು ಮೊಟ್ಟಮೊದಲ ಬಾರಿಗೆ ಮೊಲ್ಡೋವಾಕ್ಕೆ ಭೇಟಿ ನೀಡಿದ ಐತಿಹಾಸಿಕ ಪ್ರವಾಸ ಇದಾಗಿದೆ.

ನಂತರ ಜುಲೈ 21 ಮತ್ತು 22ರಂದು ಉತ್ತರ ಮ್ಯಾಸಿಡೋನಿಯಾ ಪ್ರವಾಸ ಕೈಗೊಂಡ ಅವರು ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಲ್ಲದೆ ಭಾರತ–ಉತ್ತರ ಮ್ಯಾಸಿಡೋನಿಯಾ ವ್ಯಾಪಾರ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಿ, ಆರ್ಥಿಕ ಮತ್ತು ವಾಣಿಜ್ಯ ಸಹಕಾರ ವೃದ್ಧಿಗೆ ಒತ್ತು ನೀಡಿದರು.

ಪ್ರವಾಸದ ಅಂತಿಮ ಹಂತದಲ್ಲಿ ಜುಲೈ 23ರಂದು ರೊಮೇನಿಯಾಗೆ ಭೇಟಿ ನೀಡಿದ ರಾಷ್ಟ್ರಪತಿ, ಮೂರು ದಶಕಗಳ ಬಳಿಕ ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ರಾಷ್ಟ್ರಪತಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ರೊಮೇನಿಯಾ ಮುಂದಿನ ಮೂರು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಿ ಒಪ್ಪಂದಕ್ಕೆ ಬಂದವು. ರಕ್ಷಣೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ರಾಷ್ಟ್ರಗಳು ಚರ್ಚೆ ನಡೆಸಿದವು.

ಭಾರತಕ್ಕೆ ಮರಳುವ ಮುನ್ನ ರಾಷ್ಟ್ರಪತಿ ಮುರ್ಮು ಅವರು ರೊಮೇನಿಯಾದಲ್ಲಿರುವ ಭಾರತೀಯ ಸಮುದಾಯದ ಸದಸ್ಯರು ಹಾಗೂ ‘ಫ್ರೆಂಡ್ಸ್ ಆಫ್ ಇಂಡಿಯಾ’ ಸಂಘಟನೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ಈ ಪ್ರವಾಸದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ ಬಾಂಭಣಿಯಾ, ಸಂಸದ ದಿನೇಶ್ ಶರ್ಮಾ ಹಾಗೂ ಸಂಸದ ವಿಜಯ್ ಬಘೇಲ್ ರಾಷ್ಟ್ರಪತಿಗೆ ಜೊತೆಯಾಗಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande