
ನವದೆಹಲಿ, 25 ಜುಲೈ (ಹಿ.ಸ.):
ಆ್ಯಂಕರ್:
ಪವಿತ್ರ ಆಷಾಢ ಏಕಾದಶಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶುಭಾಶಯ ಕೋರಿದ್ದಾರೆ.
ಆಷಾಢ ಏಕಾದಶಿ ಭಕ್ತಿ ಮತ್ತು ಕರುಣೆಯ ಶಾಶ್ವತ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ. ಭಗವಾನ್ ವಿಠ್ಠಲನ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸಲಿ ಎಂದು ಅವರು ಹಾರೈಸಿದ್ದಾರೆ.
ಸಮಾಜವನ್ನು ಇನ್ನಷ್ಟು ಉತ್ತಮಗೊಳಿಸುವ ದಾರಿಯಲ್ಲಿ ಸಾಗಲು ಭಗವಾನ್ ವಿಠ್ಠಲನು ಮಾರ್ಗದರ್ಶನ ಮಾಡಲಿ. ಪ್ರತಿಯೊಬ್ಬರ ಕಲ್ಯಾಣ ಮತ್ತು ಘನತೆಯ ಜೀವನಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಿ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.