ಜೀವಾತ್ಮೆ ಮತ್ತು ಪರಮಚೈತನ್ಯದ ಸಂಬಂಧ ಸಾರುವ ಸುಭಾಷಿತ ಹಂಚಿಕೊಂಡ ಪ್ರಧಾನಿ ಮೋದಿ
ನವದೆಹಲಿ, ಜುಲೈ 23(ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಾಮಾಜಿಕ ಜಾಲತಾಣ ''ಎಕ್ಸ್''ನಲ್ಲಿ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡು ಜೀವಾತ್ಮೆ ಮತ್ತು ಪರಮಚೈತನ್ಯದ ನಡುವಿನ ಆಧ್ಯಾತ್ಮಿಕ ಹಾಗೂ ಬ್ರಹ್ಮಾಂಡೀಯ ಸಂಬಂಧವನ್ನು ವಿವರಿಸಿದ್ದಾರೆ. ಆಕಾಶದಲ್ಲಿ ವ್ಯಾಪಿಸಿರುವ ತೇಜೋ
प्रधानमंत्री नरेन्द्र मोदी (फाइल फोटो)


ನವದೆಹಲಿ, ಜುಲೈ 23(ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡು ಜೀವಾತ್ಮೆ ಮತ್ತು ಪರಮಚೈತನ್ಯದ ನಡುವಿನ ಆಧ್ಯಾತ್ಮಿಕ ಹಾಗೂ ಬ್ರಹ್ಮಾಂಡೀಯ ಸಂಬಂಧವನ್ನು ವಿವರಿಸಿದ್ದಾರೆ.

ಆಕಾಶದಲ್ಲಿ ವ್ಯಾಪಿಸಿರುವ ತೇಜೋಮಯ, ಅಮೃತಮಯ ಪರಮಪುರುಷನೇ ಪ್ರತಿಯೊಬ್ಬರ ಆತ್ಮದಲ್ಲಿಯೂ ನೆಲೆಸಿದ್ದಾನೆ ಎಂಬುದೇ ಸುಭಾಷಿತದ ಸಾರ ಎಂದು ಪ್ರಧಾನಿ ತಿಳಿಸಿದ್ದಾರೆ.

ಜೀವಿಯಲ್ಲಿ ಹಾಗೂ ಪ್ರತಿಯೊಂದು ಕಣದಲ್ಲಿರುವ ತತ್ತ್ವವೇ ಬ್ರಹ್ಮಾಂಡದಲ್ಲಿಯೂ ವ್ಯಾಪಿಸಿದೆ ಎಂಬ ಸಂದೇಶವನ್ನು ಈ ಸುಭಾಷಿತ ಸಾರುತ್ತದೆ ಎಂದು ಅವರು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande