ಸುಭಾಷಿತದ ಮೂಲಕ ಆದರ್ಶ ವ್ಯಕ್ತಿಯ ಗುಣಗಳನ್ನು ವಿವರಿಸಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 22(ಹಿ.ಸ): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ''ಸುಭಾಷಿತಂ'' ಹಂಚಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಯ ಗುಣಗಳನ್ನು ವಿವರಿಸಿದ್ದಾರೆ. ಪರಕಾರ್ಯೇಷು ಯುಕ್ತಾತ್ಮಾ ಸ್ವಕಾರ್ಯೇ ಕ್ಷಿಪ್ರಸಾಧನಮ್। ಸುಹೃತ್ಕಾರ್ಯೇಷು ನಿರ್ವೃತ್ತೀ ರಾಜಕಾ
प्रधानमंत्री नरेन्द्र मोदी


ನವದೆಹಲಿ, ಜುಲೈ 22(ಹಿ.ಸ):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 'ಸುಭಾಷಿತಂ' ಹಂಚಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಯ ಗುಣಗಳನ್ನು ವಿವರಿಸಿದ್ದಾರೆ.

ಪರಕಾರ್ಯೇಷು ಯುಕ್ತಾತ್ಮಾ ಸ್ವಕಾರ್ಯೇ ಕ್ಷಿಪ್ರಸಾಧನಮ್। ಸುಹೃತ್ಕಾರ್ಯೇಷು ನಿರ್ವೃತ್ತೀ ರಾಜಕಾರ್ಯೇಷು ವಿಕ್ರಮಃ।। ಎಂಬ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಿ, ವ್ಯಕ್ತಿಯ ಚರಿತ್ರೆ ಕೇವಲ ವೈಯಕ್ತಿಕ ಕಾರ್ಯಗಳಿಂದಷ್ಟೇ ಅಲ್ಲ, ಸಮಾಜ, ಸ್ನೇಹಿತರು ಮತ್ತು ರಾಷ್ಟ್ರದತ್ತ ಇರುವ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾನೆ ಎಂಬುದರಿಂದಲೂ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಇತರರ ಕೆಲಸವನ್ನು ನಿಷ್ಠೆ ಮತ್ತು ಸಮರ್ಪಣೆಯಿಂದ ನಿರ್ವಹಿಸುವುದು, ಸ್ವಂತ ಕಾರ್ಯಗಳನ್ನು ಶೀಘ್ರವಾಗಿ ಹಾಗೂ ಸಮರ್ಥವಾಗಿ ಪೂರ್ಣಗೊಳಿಸುವುದು, ಸ್ನೇಹಿತರ ಕೆಲಸವನ್ನು ನಿಸ್ವಾರ್ಥವಾಗಿ ನೆರವೇರಿಸುವುದು ಮತ್ತು ರಾಷ್ಟ್ರದ ಕರ್ತವ್ಯಗಳನ್ನು ಧೈರ್ಯ, ಪರಾಕ್ರಮ ಹಾಗೂ ಸಮರ್ಪಣೆಯಿಂದ ಪಾಲಿಸುವ ವ್ಯಕ್ತಿಯೇ ನಿಜವಾದ ಅರ್ಥದಲ್ಲಿ ಶ್ರೇಷ್ಠ ಹಾಗೂ ಆದರ್ಶ ವ್ಯಕ್ತಿ ಎಂದು ಪ್ರಧಾನಿ ಮೋದಿ ಸುಭಾಷಿತದ ಅರ್ಥವನ್ನು ವಿವರಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande