ವೃದ್ಧೆಯ ಭೀಕರ ಕೊಲೆ, ಸೂಟ್ಕೇಸ್ನಲ್ಲಿ ಶವ ಇಟ್ಟು ಕೆರೆಗೆ ಎಸೆದ ಹಂತಕರು
ಬೆಂಗಳೂರು, 22 ಜುಲೈ (ಹಿ.ಸ.): ಆ್ಯಂಕರ್: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ 61 ವರ್ಷದ ವೃದ್ಧೆಯನ್ನು ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿರುವ ದುಷ್ಕರ್ಮಿಗಳು, ಶವವನ್ನು ಸೂಟ್ಕೇಸ್ಗೆ ತುಂಬಿ ರಾಮೋಹಳ್ಳಿ ಕೆರೆಗೆ
ಸಂದರ್ಭಿಕ ಚಿತ್ರ


ಬೆಂಗಳೂರು, 22 ಜುಲೈ (ಹಿ.ಸ.):

ಆ್ಯಂಕರ್:

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ 61 ವರ್ಷದ ವೃದ್ಧೆಯನ್ನು ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿರುವ ದುಷ್ಕರ್ಮಿಗಳು, ಶವವನ್ನು ಸೂಟ್ಕೇಸ್ಗೆ ತುಂಬಿ ರಾಮೋಹಳ್ಳಿ ಕೆರೆಗೆ ಎಸೆದು ಪರಾರಿಯಾಗಿದ್ದಾರೆ. ಚಲ್ಲಘಟ್ಟ ನಿವಾಸಿ ಜಯಮ್ಮ (61) ಕೊಲೆಯಾದ ದುರ್ದೈವಿ.

ಮೂಲತ ಮಂಡ್ಯ ಜಿಲ್ಲೆ ನಾಗಮಂಗಲದವರಾದ ಇವರು, ಚಲ್ಲಘಟ್ಟದಲ್ಲಿರುವ ಮಗ ಜೈಕುಮಾರ್ ಮನೆಯಲ್ಲಿ ವಾಸವಿದ್ದರು. ಜುಲೈ 15ರಂದು ಮಧ್ಯಾಹ್ನ ಮಗನ ಮನೆಯ ಸಮೀಪದಲ್ಲೇ ವಾಸವಿರುವ ಪರಿಚಿತರ ಮನೆಗೆ ತೆರಳಿದ್ದ ಜಯಮ್ಮ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಜೈಕುಮಾರ್ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಮಂಗಳವಾರ ರಾಮೋಹಳ್ಳಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಜಯಮ್ಮ ಅವರ ಶವ ಪತ್ತೆಯಾಗಿದೆ. ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಹಂತಕರು, ಸಾಕ್ಷ್ಯ ಮುಚ್ಚಿಹಾಕಲು ಶವವನ್ನು ದೊಡ್ಡ ಸೂಟ್ಕೇಸ್ನಲ್ಲಿ ಇರಿಸಿ ಕೆರೆಗೆ ಎಸೆದಿದ್ದಾರೆ. ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಉಂಗುರ ಹಾಗೂ ಕಿವಿಯೋಲೆಗಳು ಮಾಯವಾಗಿದ್ದು, ದರೋಡೆ ಹಾಗೂ ಹತ್ಯೆ ಉದ್ದೇಶದಿಂದ ಪರಿಚಿತರೇ ಈ ಕೃತ್ಯವೆಸೆದಿರುವ ಶಂಕೆಯಿದೆ. ವೃದ್ಧೆ ಕೊನೆಯದಾಗಿ ತೆರಳಿದ ಪರಿಚಿತರ ಮನೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande