ಕೆಯುಡಬ್ಲ್ಯೂಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟ
ಬೆಂಗಳೂರು, 21 ಜುಲೈ (ಹಿ.ಸ.): ಆ್ಯಂಕರ್:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) 2026ನೇ ಸಾಲಿನ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ವೃತ್ತಿಸೇವೆ, ಸಾಮಾಜಿಕ ಬದ್ಧತೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿ
Kuwj logo


ಬೆಂಗಳೂರು, 21 ಜುಲೈ (ಹಿ.ಸ.):

ಆ್ಯಂಕರ್:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) 2026ನೇ ಸಾಲಿನ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ವೃತ್ತಿಸೇವೆ, ಸಾಮಾಜಿಕ ಬದ್ಧತೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, ₹5,000 ನಗದು ಹಾಗೂ ಕೆಯುಡಬ್ಲ್ಯೂಜೆ ಗೌರವ ಸನ್ಮಾನವನ್ನು ಒಳಗೊಂಡಿದೆ. ಜುಲೈ 25ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ

ಡಿ.ವಿ.ಜಿ. ಪ್ರಶಸ್ತಿ: ಬಿ.ವಿ. ಗೋಪಿನಾಥ್ (ಸಂಯುಕ್ತ ಕರ್ನಾಟಕ, ಕೋಲಾರ)

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಗಿರೀಶ್ ರಾವ್ ಹತ್ವಾರ್ (ಜೋಗಿ), ಸಂಪಾದಕರು, ಕನ್ನಡಪ್ರಭ

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ: ರವಿಪ್ರಕಾಶ್ (ಪ್ರಜಾವಾಣಿ)

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಮೀನಾ ಮೈಸೂರು

ಸಿ.ಆರ್. ಕೃಷ್ಣರಾವ್ ಪ್ರಶಸ್ತಿ: ಅನಂತ ಚಿನಿವಾರ್, ಹಿರಿಯ ಪತ್ರಕರ್ತರು

ಡಾ. ಎಂ.ಎಂ. ಕಲ್ಬುರ್ಗಿ ಪ್ರಶಸ್ತಿ: ಜಾನ್ ಮಥಾಯಿಸ್, ಹಿರಿಯ ಪತ್ರಕರ್ತರು

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ: ಮಾವಳ್ಳಿ ಶಂಕರ್ (ಅಂಬೇಡ್ಕರ್ ವಾದ ಪತ್ರಿಕೆ)

ಪಾಟೀಲ್ ಪುಟ್ಟಪ್ಪ (ಪಾಪು) ಪ್ರಶಸ್ತಿ: ಅಡಿವೇಂದ್ರ ಇನಾಂದಾರ, ಹಿರಿಯ ಪತ್ರಕರ್ತರು, ಬಾದಾಮಿ

ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಳ ಕಿರುಗಾವಲು (ಜನೋದಯ, ಮಂಡ್ಯ)

ಬದರಿನಾಥ ಹೊಂಬಾಳೆ ಪ್ರಶಸ್ತಿ: ಡಿ.ಜಿ. ಮೋಮಿನ್ (ಗದಗ)

ಕಿಡಿಶೇಷಪ್ಪ ಪ್ರಶಸ್ತಿ: ದಿನೇಶ್ ಗೌಡಗೆರೆ, ಸಂಪಾದಕರು, ಇಬ್ಬನಿ ಸೂರ್ಯ (ಚಿತ್ರದುರ್ಗ)

ರವಿ ಬೆಳಗೆರೆ ಪ್ರಶಸ್ತಿ: ಎಚ್.ಸಿ. ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು

ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಭವಾನಿ ಲಕ್ಷ್ಮಿನಾರಾಯಣ, ಹಿರಿಯ ಪತ್ರಕರ್ತರು (ಚಿಕ್ಕಬಳ್ಳಾಪುರ)

ಎಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಿ.ಎಸ್. ಜಯರಾಂ (ಪಾಂಡವಪುರ)

ರಾಜಶೇಖರ ಕೋಟಿ ಪ್ರಶಸ್ತಿ: ಟಿ.ವಿ. ರಾಜೇಶ್ವರ (ಆಂದೋಲನ, ಮೈಸೂರು)

ಪಿ. ರಾಮಯ್ಯ ಪ್ರಶಸ್ತಿ: ಎಚ್.ಬಿ. ದಿನೇಶ್ (ಹಿರಿಸಾವೆ)

ಮಾ. ರಾಮಮೂರ್ತಿ ಪ್ರಶಸ್ತಿ: ಪ್ರದೀಪ್ ಅಣ್ಣಾಜಿ ಕುಲಕರ್ಣಿ, ಹಿರಿಯ ಪತ್ರಕರ್ತರು (ವಿಜಯಪುರ)

ಮಹದೇವ ಪ್ರಕಾಶ್ ಪ್ರಶಸ್ತಿ: ಸುರೇಶ್ ಕೆ. (ವಿಜಯ ಕರ್ನಾಟಕ, ಬೆಳಗಾವಿ)

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಶ್ರೀಕಾಂತ್ ಭಟ್ (ವಿಜಯವಾಣಿ, ಬೆಂಗಳೂರು)

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಜಿ. ವಾದಿರಾಜ್ ಕಮರೂರು, ಸ್ಥಾನಿಕ ಸಂಪಾದಕರು (ಹೊಸದಿಗಂತ, ಶಿವಮೊಗ್ಗ)

ಎಂ. ನಾಗೇಂದ್ರ ರಾವ್ ಪ್ರಶಸ್ತಿ: ಕಣ್ಣಪ್ಪ ಉಷಾಮಹಿ, ಹಿರಿಯ ಪತ್ರಕರ್ತರು (ಶಿವಮೊಗ್ಗ)

ಶ್ರೀಮತಿ ಗಿರಿಜಮ್ಮ–ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಬಿ.ಕೆ. ರಮ್ಯಶ್ರೀ (ಚಂದನ/ಆಕಾಶವಾಣಿ)

ಅಪ್ಪಾಜಿಗೌಡ (ಸಿನಿ) ಪ್ರಶಸ್ತಿ: ಹರ್ಷವರ್ಧನ್ ಬ್ಯಾಡನೂರು (ವಿಜಯವಾಣಿ)

ಮೂಡಣ, ಹಾವೇರಿ ಪ್ರಶಸ್ತಿ: ಎಸ್.ಆರ್. ನಂದಿಹಳ್ಳಿ (ಡಿಡಿ-1, ಹಾವೇರಿ)

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು

ರುದ್ರಯ್ಯ ಕೆ.ಎಚ್. (ವಿಜಯ ಕರ್ನಾಟಕ, ಚಿಕ್ಕಮಗಳೂರು)

ಕಿರಣ್ (ಸುವರ್ಣ ನ್ಯೂಸ್, ಚಿಕ್ಕಮಗಳೂರು)

ಬಿ. ಉಮೇಶ್ ನಾಯಕ್ (ವಿಜಯವಾಣಿ, ಚಿಕ್ಕಮಗಳೂರು)

ಅಕ್ರಮ್ ಅಬ್ದುಲ್ ಹಕ್ (ಹಿರಿಯ ಫೋಟೋ ಪತ್ರಕರ್ತ)

ಇಬ್ರಾಹಿಂ ಅಡ್ಕಸ್ಥಳ (ಮಂಗಳೂರು)

ಬಿಳಿಗಿರಿ ಶ್ರೀನಿವಾಸ್ (ಚಾಮರಾಜನಗರ)

ಎಚ್.ಪಿ. ರವಿಕುಮಾರ್ (ಜನತಾ ಮಾಧ್ಯಮ, ಹಾಸನ)

ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಹಿರಿಯರು ಹಾಗೂ ಕಾರ್ಯನಿರತ ಪತ್ರಕರ್ತರ ಸಾಧನೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಾಗಿದ್ದು, ಜುಲೈ 25ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕೃತರನ್ನು ಸನ್ಮಾನಿಸಲಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande