
ಬಳ್ಳಾರಿ, 21 ಜುಲೈ (ಹಿ.ಸ.)
ಆ್ಯಂಕರ್ : ನಗರದ ಹಿರಿಯಾಳ್ ಕುಡಂ ಈದ್ಗಾ ರಸ್ತೆಯ ಕುರುಗೋಡು ತಾಲೂಕು ಪಶ್ಚಿಮ ವಲಯ ವ್ಯಾಪ್ತಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಶಾಲೆಯಲ್ಲಿ ಹೊಸ ವಿಷಯವಾದ ಎಐ ತಂತ್ರಾಂಶ ಆಧಾರಿತ ಬೋಧನೆ ಮಾಡಲು ಕಂಪ್ಯೂಟರ್ ಅತಿಥಿ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕಂಪ್ಯೂಟರ್ನಲ್ಲಿ ಡಿಪ್ಲೋಮಾ, ಬಿ.ಸಿ.ಎ., ಬಿ.ಎಸ್.ಸಿ ಕಂಪ್ಯೂಟರ್ ಸೈನ್ಸ್ ಹಾಗೂ ಕಂಪ್ಯೂಟರ್ ವಿಷಯದಲ್ಲಿ ಪಿ.ಜಿ ಹಾಗೂ ಡಿಪ್ಲೋಮಾ ತತ್ಸಮಾನ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಜು.23 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಖುದ್ದಾಗಿ ಶಾಲಾ ಮುಖೋಪಾಧ್ಯಯರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನ (ಮೊ.7892989253) ಅಥವಾ ಶಾಲೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಶಾಲೆಯ ಮುಖೋಪಾಧ್ಯಯರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್