ಗುರು ಪರಂಪರೆಗೆ ಮಾದರಿ ನಾಡೋಜ ಪ್ರೊ. ಸಿ. ಮಹಾದೇವಪ್ಪ:ಹಂ.ಪ.ನಾಗರಾಜಯ್ಯ
ಬೆಂಗಳೂರು, 21 ಜುಲೈ (ಹಿ.ಸ.): ಆ್ಯಂಕರ್: ಒಂದೇ ಬಾರಿಗೆ ವಿದ್ಯಾರ್ಥಿಗಳಿಗೆ ಪೂರ್ಣ ಅರ್ಥವಾಗುವಂತೆ ಪಾಠ ಮಾಡುತ್ತಿದ್ದ ನನ್ನ ಗುರುಗಳಾದ ನಾಡೋಜ ಪ್ರೊ. ಸಿ. ಮಹಾದೇವಪ್ಪ ಅವರು ಗುರು ಪರಂಪರೆಗೆ ಮಾದರಿಯಾಗಿದ್ದಾರೆ ಎಂದು ಭಾಷಾ ವಿಜ್ಞಾನಿ ನಾಡೋಜ ಡಾ. ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು. ಶತಾಯುಷಿ ನಾ
ನುಡಿನಮನ


ಬೆಂಗಳೂರು, 21 ಜುಲೈ (ಹಿ.ಸ.):

ಆ್ಯಂಕರ್:

ಒಂದೇ ಬಾರಿಗೆ ವಿದ್ಯಾರ್ಥಿಗಳಿಗೆ ಪೂರ್ಣ ಅರ್ಥವಾಗುವಂತೆ ಪಾಠ ಮಾಡುತ್ತಿದ್ದ ನನ್ನ ಗುರುಗಳಾದ ನಾಡೋಜ ಪ್ರೊ. ಸಿ. ಮಹಾದೇವಪ್ಪ ಅವರು ಗುರು ಪರಂಪರೆಗೆ ಮಾದರಿಯಾಗಿದ್ದಾರೆ ಎಂದು ಭಾಷಾ ವಿಜ್ಞಾನಿ ನಾಡೋಜ ಡಾ. ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.

ಶತಾಯುಷಿ ನಾಡೋಜ ಪ್ರೊ. ಸಿ. ಮಹದೇವಪ್ಪ ಅವರಿಗೆ ನಿಡುಮಾಮಿಡಿ ಜಗದ್ಗುರು ಮಠದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಸ್ಪುಟವಾಗಿ ಹಾಗೂ ಸ್ಪಷ್ಟವಾಗಿ ಪಠ್ಯ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ವಿಷಯ ಗ್ರಹಿಕೆ ಸುಲಭವಾಗುತ್ತಿತ್ತು. ಉಡುಗೆಯ ಬಗ್ಗೆ ಬಹಳ ಆಸಕ್ತಿ ಹಾಗೂ ಪ್ರೀತಿ ಹೊಂದಿದ್ದ ಅವರದು ಬಹಳ ಶಿಸ್ತಿನ ವೈಕ್ತಿತ್ವ.

ಸಂಶೋಧನೆ ಕ್ಷೇತ್ರದಲ್ಲಿ ಭಿನ್ನವಾಗಿ ಯೋಚಿಸುತ್ತಿದ್ದ, ಆ ವಿಚಾರದಲ್ಲಿ ಯಾವುದೇ ಭಿನ್ನ ಅಭಿಪ್ರಾಯಗಳಿಗೆ ಕಿವಿಗೊಡದ ಗಟ್ಟಿತನದವರಾಗಿದ್ದರು. ಸೃಜನಾತ್ಮಕ ಹಾಗೂ ಸೃಜನಾತ್ಮಕೇತರ ಎರಡೂ ಕ್ಷೇತ್ರಗಳಲ್ಲಿ ಛಾಪು ಮಾಡಿಸಿದ ವಿದ್ವಾಂಸರಾಗಿದ್ದಾರೆ.

ಪೂರ್ಣ ಜೀವನ ಮಾಡಿರುವ ಹಿರಿಯ ಚೇತನ ಮಹಾದೇವಪ್ಪ ಅವರಿಗೆ ಸಿಗಬೇಕಿದ್ದ ಮಾನ್ಯತೆ ಸಿಗದಿರುವುದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಶ್ರೀ ವೀರಭದ್ರ ಚೆನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸಿ. ಮಹದೇವಪ್ಪ ಅವರು ನಮ್ಮ ಕಾಲಘಟ್ಟದ ಅಪರೂಪದ ವಿದ್ವಾಂಸರು ಮಾತ್ರವಲ್ಲ, ಅವರು ವಿದ್ವಾಂಸರಿಗೆ ವಿದ್ವಾಂಸರಾಗಿದ್ದರು. ಸಾವಿರಾರು ಮಂದಿ ವಿದ್ವಾಂಸರನ್ನು ಹುಟ್ಟುಹಾಕಿದ ಚೇತನ. ಅವರ ಹೃದಯ ವೈಶಾಲ್ಯ ಎಷ್ಟು ದೊಡ್ಡದಿತ್ತೆಂದರೆ ಅವರ ಶಿಷ್ಯ ಅಧ್ಯಕ್ಷರಾಗಿದ್ದ ಸಮಿತಿಯಲ್ಲಿ ಅವರು ಸಮಾನ್ಯ ಸದಸ್ಯನಾಗಿಯೂ ಸೇವೆ ಸಲ್ಲಿಸುವಂತಹ ಔದಾರ್ಯದ ಮೇರು ವ್ಯಕ್ತಿತ್ವ ಅವರದಾಗಿತ್ತು. ಯಾವುದೇ ವಿಚಾರದಲ್ಲಿ ಪರಿಪೂರ್ಣ ಬಯಸುತ್ತಿದ್ದ ಅವರಿಗೆ, ಲೋಪ ಕಂಡರೆ ಕಡುಸಿಟ್ಟು ಬರುತ್ತಿತ್ತು. ಅಂತಹ ಉತ್ತಮ ಸಂಶೋಧಕ ಹಾಗೂ ವಿದ್ವಾಂಸರಾಗಿದ್ದ ಸಿ. ಮಹದೇವಪ್ಪ ಅವರಿಗೆ ಸಮಾಜ ಗುರುತಿಸದಿದ್ದದ್ದು ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಶ್ರೀ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಅಂತರಂಗದ ವಿಚಾರವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎಲ್ಲರಿಗೂ ಮುಟ್ಟಿಸಿದ, ಜ್ಞಾನದ ಬೆಳಕಾಗಿದ್ದ ವಿದ್ವಾಂಸ ಸಿ. ಮಹದೇವಪ್ಪ ಅವರಿಗೆ ಮೌನ ದ್ವನಿಯಾಗಿ ಗೌರವ ಸಲ್ಲಿಸಬೇಕಿದೆ. ಅಂತಹ ಮೇರು ವ್ಯಕ್ತಿತ್ವ ನಮಗೆ ದಾರಿ ದೀಪ ಎಂದ ಅಭಿಪ್ರಾಯಪಟ್ಟರು.

ಪ್ರೊ. ಜಿ. ಆಶ್ವತ್ಥನಾರಾಯಣ, ಡಾ. ಎಚ್. ಎಸ್. ಶಿವಪ್ರಕಾಶ್, ಪ್ರೊ. ಆರ್. ಲಕ್ಷ್ಮೀನಾರಾಯಣ, ಡಾ. ಬಸವರಾಜ ಕಲ್ಗುಡಿ, ಡಾ. ಸಿ. ಶಿವಕುಮಾರ ಸ್ವಾಮಿ, ಡಾ. ನಾ. ಗೀತಾಚಾರ್ಯ, ಡಾ. ತಾ.ನಂ. ಕುಮಾರಸ್ವಾಮಿ ಅವರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶತಾಯುಷಿ ನಾಡೋಜ ಪ್ರೊ. ಸಿ. ಮಹದೇವಪ್ಪ ಅವರಿಗೆ ಶ್ರೀ ನಿಡುಮಾಮಿಡಿ ಜಗದ್ಗುರು ಮಠದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಡಾ. ತಾ.ನಂ. ಕುಮಾರಸ್ವಾಮಿ, ಡಾ. ಸಿ. ಶಿವಕುಮಾರ ಸ್ವಾಮಿ, ಪ್ರೊ. ಆರ್. ಲಕ್ಷ್ಮೀನಾರಾಯಣ, ಡಾ. ಬಸವರಾಜ ಕಲ್ಗುಡಿ, ಶ್ರೀ ವೀರಭದ್ರ ಚೆನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ, ಶ್ರೀ ಶಿವರುದ್ರ ಮಹಾಸ್ವಾಮೀಜಿ, ಡಾ. ಎಚ್. ಎಸ್. ಶಿವಪ್ರಕಾಶ್, ಪ್ರೊ. ಜಿ. ಆಶ್ವತ್ಥನಾರಾಯಣ, ಡಾ. ನಾ. ಗೀತಾಚಾರ್ಯ ಡಾ. ಹಂ.ಪ. ನಾಗರಾಜಯ್ಯ, ಅವರು ನುಡಿನಮನ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande