
ಬಳ್ಳಾರಿ, 21 ಜುಲೈ (ಹಿ.ಸ.)
ಆ್ಯಂಕರ್: ಕೌಶಲ್ಯ ಕರ್ನಾಟಕ ಹಾಗೂ ಎಕ್ಸೆಲರೇಟರ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ಜುಲೈ 29 ರಂದು ಕಲಬುರಗಿಯ ಶಂಭೋಗನಹಳ್ಳಿಯ ಐವಾನ್-ಇ-ಶಾಹಿ ಪ್ರದೇಶದ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಬೃಹತ್ ಉದ್ಯೋಗ ಮೇಳ 2026’ ಆಯೋಜಿಸಲಾಗಿದೆ.
ಈ ಮೇಳದಲ್ಲಿ ಪ್ರಮುಖ ಬಹುರಾಷ್ಟಿಯ ಕಂಪನಿಗಳು ಹಾಗೂ ವಿವಿಧ ವಲಯಗಳ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಲಿದ್ದು, ನಿರುದ್ಯೋಗ ಯುವಕ- ಯುವತಿಯರಿಗೆ ಬೃಹತ್ ಮಟ್ಟದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
*ಶೈಕ್ಷಣಿಕ ಅರ್ಹತೆಗಳು:*
10ನೇ ತರಗತಿ, 12ನೇ ತರಗತಿ, ಐ.ಟಿ.ಐ ಮತ್ತು ಡಿಪ್ಲೋಮಾ
ಪದವಿ: ಬಿ.ಸಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಎ.
ಇಂಜಿನಿಯರಿಂಗ್: ಮೆಕ್ಯಾನಿಕಲ್, ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್ ಮತ್ತು ಸಿವಿಲ್ ವಿಭಾಗಗಳು.
*ಉದ್ಯೋಗಾಕಾಂಕ್ಷಿಗಳ ನೋಂದಣಿ ಲಿಂಕ್ಗಳು:*
ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
10ನೇ, 12ನೇ, ಐಟಿಐ, ಡಿಪ್ಲೊಮಾ, ಬಿ.ಸಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಎ. ಅಭ್ಯರ್ಥಿಗಳು https://forms.gle/nn7fZro6hMctptgD6 ಇಲ್ಲಿ ನೋಂದಾಯಿಸಿಕೊಳ್ಳಬೇಕು.
ಬಿ.ಇ (ಇಂಜಿನಿಯರಿAಗ್) ಅಭ್ಯರ್ಥಿಗಳು https://forms.gle/7MMtsNin9rySAcgBA ಇಲ್ಲಿ ನೋಂದಾಯಿಸಿಕೊಳ್ಳಬೇಕು.
ಉದ್ಯೋಗದಾತರು ನೋಂದಣಿಗೆ https://forms.gle/veiTZVas4be7hQnT7 ಇಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.9148130287, 6366352281 ಗೆ ಕರೆಮಾಡಿ ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್