ಬಳ್ಳಾರಿ: ಎಸ್ಐಆರ್ : ಶೇ.69.17 ರಷ್ಟು ಡಿಜಿಟಲೀಕರಣ
ಬಳ್ಳಾರಿ, 21 ಜುಲೈ (ಹಿ.ಸ.): ಆ್ಯಂಕರ್: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಲ್ಲಿ ವಿತರಿಸಲಾಗಿರುವ ಎಸ್ಐಆರ್ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯು ಶೇ. 69.17 ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು
Bellary: SIR: 69.17% digitization


ಬಳ್ಳಾರಿ, 21 ಜುಲೈ (ಹಿ.ಸ.):

ಆ್ಯಂಕರ್: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಲ್ಲಿ ವಿತರಿಸಲಾಗಿರುವ ಎಸ್ಐಆರ್ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯು ಶೇ. 69.17 ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

ಎಸ್ಐಆರ್ ಪ್ರಕ್ರಿಯೆಯಲ್ಲಿ ಮನೆ-ಮನೆ ಭೇಟಿ ಪರಿಶೀಲನೆ ಮತ್ತು ಡಿಜಿಟಲೀಕರಣ ಅವಧಿ ಆಗಸ್ಟ್ 08 ರ ವರೆಗೆ ನಡೆಯಲಿದೆ. ಆಗಸ್ಟ್ 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು.

ಜಿಲ್ಲೆಯಲ್ಲಿ ಒಟ್ಟು 12,29,586 ಮತದಾರರಿದ್ದು, 12,29,586 ಮತದಾರರಿಗೂ ಎಸ್ಐಆರ್ ಗಣತಿ ನಮೂನೆಗಳನ್ನು ಶೇ.100 ರಷ್ಟು ವಿತರಿಸಲಾಗಿದೆ. ಅದರಲ್ಲಿ 8,50,506 (ಶೇ.69.17 ರಷ್ಟು) ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 5,622 ನಮೂನೆಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ.

ಮನೆ-ಮನೆ ಭೇಟಿ ಪರಿಶೀಲನೆಯ ಸಮಯದಲ್ಲಿ ಜಿಲ್ಲೆಯಾದ್ಯಂತ ಒಟ್ಟು 60,252 ಮತದಾರರನ್ನು ಎಎಸ್ಡಿಡಿಒ (ಗೈರುಹಾಜರಿ, ಸ್ಥಳಾಂತರ, ಮೃತ, ದ್ವಿಪ್ರತಿ/ಈಗಾಗಲೇ ನೋಂದಾಯಿತ ಮತ್ತು ಇತರೆ) ವರ್ಗದಲ್ಲಿ ಗುರುತಿಸಲಾಗಿದೆ.

ಖಾಯಂ ಸ್ಥಳಾಂತರಗೊಂಡವರು: 29,988

ಮೃತ ಮತದಾರರು: 21,645

ಈಗಾಗಲೇ ನೋಂದಾಯಿತ/ದ್ವಿಪ್ರತಿ: 7,467

ಗೈರುಹಾಜರಿ / ಸಿಗದವರು: 1,007

ಇತರೆ: 145

*ವಿಧಾನಸಭಾ ಕ್ಷೇತ್ರವಾರು ಪ್ರಗತಿ ನೋಟ (ಜುಲೈ 20 ರಂತೆ):*

91- ಕಂಪ್ಲಿ: 242 ಮತಗಟ್ಟೆಗಳು, 2,28,666 ಮತದಾರರು, 80,569 ಡಿಜಿಟಲೀಕರಣಗೊಂಡ ನಮೂನೆಗಳು, 7,548 ಎಎಸ್ಡಿಡಿಒ ಮತದಾರರು.

92- ಸಿರುಗುಪ್ಪ: 229 ಮತಗಟ್ಟೆಗಳು, 2,28,277 ಮತದಾರರು, 67,958 ಡಿಜಿಟಲೀಕರಣಗೊಂಡ ನಮೂನೆಗಳು, 13,291 ಎಎಸ್ಡಿಡಿಒ ಮತದಾರರು.

93- ಬಳ್ಳಾರಿ (ಗ್ರಾಮೀಣ): 236 ಮತಗಟ್ಟೆಗಳು, 2,51,325 ಮತದಾರರು, 1,66,523 ಡಿಜಿಟಲೀಕರಣಗೊಂಡ ನಮೂನೆಗಳು, 16,938 ಎಎಸ್ಡಿಡಿಒ ಮತದಾರರು.

94- ಬಳ್ಳಾರಿ ನಗರ : 261 ಮತಗಟ್ಟೆಗಳು, 2,79,144 ಒಟ್ಟು ಮತದಾರರು, 1,52,819 ಡಿಜಿಟಲೀಕರಣಗೊಂಡ ನಮೂನೆಗಳು, 9,090 ಎಎಸ್ಡಿಡಿಒ ಮತದಾರರು.

95- ಸಂಡೂರು: 259 ಮತಗಟ್ಟೆಗಳು, 2,42,174 ಒಟ್ಟು ಮತದಾರರು, 1,82,637 ಡಿಜಿಟಲೀಕರಣಗೊಂಡ ನಮೂನೆಗಳು, 13,385 ಎಎಸ್ಡಿಡಿಒ ಮತದಾರರು.

ಒಟ್ಟು: ಜಿಲ್ಲೆಯಲ್ಲಿ 1,227 ಮತಗಟ್ಟೆಗಳು, ಒಟ್ಟು 12,29,586 ಮತದಾರರು, 8,50,506 (ಶೇ.69.17) ಡಿಜಿಟಲೀಕರಣಗೊಂಡ ನಮೂನೆಗಳು, 60,252 ಎಎಸ್ಡಿಡಿಒ ಮತದಾರರಿದ್ದಾರೆ.

*ಸಾರ್ವಜನಿಕರಿಗೆ ಮನವಿ:*

ಆಗಸ್ಟ್ 8 ರವರೆಗೆ ಮನೆ-ಮನೆ ಭೇಟಿ ಪರಿಶೀಲನಾ ಅಭಿಯಾನ ನಡೆಯಲಿದ್ದು, ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಸಾರ್ವಜನಿಕರು ಹಾಗೂ ಮತದಾರರು ಮನೆಗೆ ಆಗಮಿಸುವ ಬಿಎಲ್ಒ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಈಗಾಗಲೇ ವಿತರಿಸಲಾಗಿರುವ ಎಸ್ಐಆರ್ ನಮೂನೆಗಳನ್ನು ಭರ್ತಿ ಮಾಡಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande