
ಕೊಪ್ಪಳ, 01 ಜುಲೈ (ಹಿ.ಸ.)
ಆ್ಯಂಕರ್ : ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಒಳಮೀಸಲಾತಿ ಹೋರಾಟ ಆಂದೋಲನದ ಮೂಲಕ ಜಿಲ್ಲಾ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜುಲೈ ಮಾಹೆಯಲ್ಲಿ ಹಮ್ಮಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಆಂದೋಲನದ ಸಂಸ್ಥಾಪಕ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕೋರಿದ್ದಾರೆ.
ಜಿಲ್ಲೆಯ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ: ಅಂಕಪಟ್ಟಿ: ಎಸ್ಎಸ್ಎಲ್ಸಿ ಅಥವಾ ಪಿಯುಸಿ ಅಂಕಪಟ್ಟಿ ಜಾತಿ ಮತ್ತು ಆದಾಯ ಪ್ರಮಾಣಪತ್ರ: ಪರಿಶಿಷ್ಟ ಪಂಗಡ (ನಾಯಕ/ವಾಲ್ಮೀಕಿ/ತಳವಾರ ಇತರೆ) ಸಮುದಾಯಕ್ಕೆ ಸೇರಿದ ಜಾತಿ ಪ್ರಮಾಣಪತ್ರ. ಆಧಾರ್ ಕಾರ್ಡ್: ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ.
ಬ್ಯಾಂಕ್ ಪಾಸ್ಬುಕ್: ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರ (ಪ್ರೋತ್ಸಾಹಧನ ಜಮೆಯಾಗಲು). ಭಾವಚಿತ್ರ: ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ. ವ್ಯಾಸಂಗ ಪ್ರಮಾಣಪತ್ರ: ಪ್ರಸ್ತುತ ಮುಂದಿನ ತರಗತಿಗೆ ಪ್ರವೇಶ ಪಡೆದಿರುವ ರಶೀದಿ ಅಥವಾ ಕಾಲೇಜು ಗುರುತಿನ ಚೀಟಿ.
ಆಸಕ್ತರು ತಮ್ಮ ಮಾಹಿತಿಯನ್ನು ಜುಲೈ 10 ರೊಳಗೆ ಮಂಜುನಾಥ ಜಿ. ಗೊಂಡಬಾಳ (ಮೊ: 9448300070), ಮಾರುತಿ ಕಾಟ್ರಳ್ಳಿ (ಮೊ: 6363195339), ನಾರಾಯಣ ನಾಯಕ (ಮೊ: 7411119400) ಸಂಪರ್ಕಿಸಿ ಅರ್ಜಿಯನ್ನು ಪಡೆಯಬಹುದು ಮತ್ತು ಸಲ್ಲಿಸಬಹುದು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್