
ಬಳ್ಳಾರಿ, 01 ಜುಲೈ (ಹಿ.ಸ.):
ಆ್ಯಂಕರ್ : ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆಯನ್ವಯ, ಜಿಲ್ಲೆಯ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದೀರ್ಘಾವಧಿಯಿಂದ ಆಶ್ರಯ ಪಡೆದಿರುವ ಹಾಗೂ ವಿವಿಧ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ 7 ರಿಂದ 18 ವರ್ಷದೊಳಗಿನ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವ ‘ಪೋಷಕತ್ವ ಕಾರ್ಯಕ್ರಮ' ದಡಿ ಅರ್ಹ ಸಾಕು ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸಿ, ಅವರಿಗೆ ಕೌಟುಂಬಿಕ ವಾತಾವರಣದಲ್ಲಿ ಪ್ರೀತಿ ಮತ್ತು ಕಾಳಜಿ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ದೂರದೃಷ್ಟಿಯಾಗಿದೆ.
ಯಾರೆಲ್ಲಾ ಈ ವ್ಯಾಪ್ತಿಗೆ ಬರುತ್ತಾರೆ?:
ದೀರ್ಘಾವಧಿಯವರೆಗೆ ಪೋಷಕರು ಭೇಟಿ ನೀಡದ ಅಥವಾ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಪೋಷಕರ ಮಕ್ಕಳು. ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ 07 ರಿಂದ 18 ವರ್ಷದೊಳಗಿನ ಮಕ್ಕಳು. ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ವಿಶೇಷ ಚೇತನವುಳ್ಳ ಪೋಷಕರ ಮಕ್ಕಳು ಹಾಗೂ ಅಪಾಯದ ಅಂಚಿನಲ್ಲಿರುವ ಮಕ್ಕಳು.
ಈ ಯೋಜನೆಯಡಿ ಮಗುವಿನ ಅಗತ್ಯತೆಯ ಆಧಾರದ ಮೇಲೆ ವಿಸ್ತರಿತ ಕುಟುಂಬ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಹಾರೈಕೆಗೆ ಅವಕಾಶ ನೀಡಲಾಗುತ್ತದೆ.
*ಪೋಷಕತ್ವದ ಅವಧಿ:*
ಅಲ್ಪಾವಧಿ ಪೋಷಕತ್ವ: 01 ವರ್ಷಕ್ಕಿಂತ ಒಳಗಿನ ಅವಧಿ.
ದೀರ್ಘಾವಧಿ ಪೋಷಕತ್ವ: 01 ವರ್ಷಕ್ಕಿಂತ ಹೆಚ್ಚಿನ ಅವಧಿ.
ಮಗು ಮತ್ತು ಕುಟುಂಬದ ನಡುವಿನ ಹೊಂದಾಣಿಕೆಯ ಮೌಲ್ಯಮಾಪನದ ಆಧಾರದ ಮೇಲೆ, ಮಗುವಿಗೆ 18 ವರ್ಷ ತುಂಬುವವರೆಗೆ ಮಕ್ಕಳ ಕಲ್ಯಾಣ ಸಮಿತಿಯು ಈ ಅವಧಿಯನ್ನು ನಿಯತಕಾಲಿಕವಾಗಿ ವಿಸ್ತರಿಸಬಹುದಾಗಿದೆ. ಮಗುವಿನ ಸಾಂಸ್ಕøತಿಕ ಹಿನ್ನೆಲೆಗೆ ಹೊಂದಿಕೆಯಾಗುವ ಬುಡಕಟ್ಟು/ಸಮುದಾಯಗಳಿಗೆ ಇದರಲ್ಲಿ ಆದ್ಯತೆ ನೀಡಲಾಗುವುದು.
2026-27ನೇ ಸಾಲಿನ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು,
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಂತಿಧಾಮ ಆವರಣ ಹತ್ತಿರ,
ಎನ್.ಸಿ.ಸಿ. ಆವರಣ, ಕಂಟೋನ್ಮೆಂಟ್, ಬಳ್ಳಾರಿ.
ಹೆಚ್ಚಿನ ಮಾಹಿತಿಗಾಗಿ ದೂ.08392-241373, ಮೊ.7090376455, 9743446477 ಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್