
ತೆಕ್ಕಲಕೋಟೆ, 01 ಜುಲೈ (ಹಿ.ಸ.)
ಆ್ಯಂಕರ್ : ಸಿರುಗುಪ್ಪ ತಾಲೂಕಿನ 110 ಕೆವಿ ತೆಕ್ಕಲಕೋಟೆ ಮುಖ್ಯ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಾಗೂ ಲೈನ್ ಪಕ್ಕದ ಗಿಡಗಂಟೆಗಳನ್ನು ಕತ್ತರಿಸುವ ಕೆಲಸ ಹಮ್ಮಿಕೊಂಡಿರುವುದರಿಂದ ಜುಲೈ 02 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ಎಫ್-12 ಬೂದುಗುಪ್ಪ ಐಪಿ ಫೀಡರ್, ಎಫ್-13 ದೇವಿನಗರ ಐಪಿ ಫೀಡರ್, ಎಫ್-2 ನಿಟ್ಟೂರು ಐಪಿ ಫೀಡರ್ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಕೃಷಿ ಪಂಪ್ಸೆಟ್ ಐಪಿ ಫೀಡರ್ಗಳ ವಿದ್ಯುತ್ ಸರಬರಾಜು ಸಮಯವನ್ನು ಬೆಳಿಗ್ಗೆ 03 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಬದಲಾಯಿಸಲಾಗಿದೆ.
ಸಾರ್ವಜನಿಕರು ಹಾಗೂ ರೈತರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತೆಕ್ಕಲಕೋಟೆ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್