
ಸಿರುಗುಪ್ಪ, 01 ಜುಲೈ (ಹಿ.ಸ.)
ಆ್ಯಂಕರ್ :
ಸಿರುಗುಪ್ಪ ತಾಲ್ಲೂಕಿನಲ್ಲಿ ಹೊಸ 110 ಕೆವಿ ಡಬಲ್ ಸಕ್ರ್ಯೂಟ್ ಲೈನ್ ತಂತಿ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 02 ಮತ್ತು ಜುಲೈ 03 ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಸಿರುಗುಪ್ಪ ನಗರ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ.
ಹೊಸದಾಗಿ ನಿರ್ಮಿಸಲಾಗಿರುವ 110 ಕೆವಿ ಶ್ರೀಧರಗಡ್ಡೆ ಮುಖ್ಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಡಬಲ್ ಸಕ್ರ್ಯೂಟ್ ಲೈನ್ ಕಾಮಗಾರಿಯು ಹಾಲಿ ಇರುವ 110 ಕೆವಿ ಸಿರುಗುಪ್ಪ-ದಡೇಸುಗೂರು ಮಾರ್ಗದ ಮೇಲಿಂದ ಹಾದುಹೋಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 110 ಕೆವಿ ಸಿರುಗುಪ್ಪ ಮುಖ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುತ್ತಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಸಿರುಗುಪ್ಪ ನಗರ, ದೇಶನೂರು, ಇಬ್ರಾಹಿಂಪುರ, ರಾರಾವಿ, ಕುರುವಳ್ಳಿ, ಕೆ.ಬೆಳಗಲ್ಲು, ಬಗ್ಗೂರು, ಕೆಂಚನಗುಡ್ಡ, ದೇವಲಾಪುರ, ಅರಳಿಗನೂರು, ಬಾಗೇವಾಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳು. ಹಾಗಾಗಿ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ತಾಂತ್ರಿಕ ಕಾಮಗಾರಿಗೆ ಸಹಕರಿಸಬೇಕಾಗಿ ಸಿರುಗುಪ್ಪ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್