
ಕೋಲಾರ, ಜುಲೈ ೧:ಹಿ.ಸ:
ಆ್ಯಂಕರ್:
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಚೌಡೇಶ್ವರಿ ಆಸ್ಪತ್ರೆ, ಕೋಲಾರದಲ್ಲಿ ವೈದ್ಯರಿಗೆ ಕೆನರಾ ಬ್ಯಾಂಕ್ ಮುಖ್ಯ ಶಾಖೆ, ಕೋಲಾರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕೆನರಾ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕರಾದ ಶಿವಕುಮಾರ್, ಹಿರಿಯ ವ್ಯವಸ್ಥಾಪಕರಾದ ಉಮೇಶ್, ಅಧಿಕಾರಿಗಳಾದ ಶ್ರೀಮತಿ ಪ್ರತ್ಯೂಷಾ ಹಾಗೂ ಶ್ರೀ ರಂಗಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಚೌಡೇಶ್ವರಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಬೀರೇಗೌಡ ವೈ. ಸಿ., ರೇಡಿಯಾಲಜಿಸ್ಟ್ ಡಾ. ಮಂಜುನಾಥ್ ವೈ. ಸಿ. ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಉಮಾದೇವಿ ಬಿ. ವಿ. ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು.
ಬ್ಯಾಂಕ್ ಅಧಿಕಾರಿಗಳು ಮಾತನಾಡಿ, ವೈದ್ಯರು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ, ಮಾನವೀಯತೆ ಹಾಗೂ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿ, ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಸನ್ಮಾನ ಸ್ವೀಕರಿಸಿದ ಡಾ. ಬೀರೇಗೌಡ ವೈ. ಸಿ., ಡಾ. ಮಂಜುನಾಥ್ ವೈ. ಸಿ. ಹಾಗೂ ಡಾ. ಉಮಾದೇವಿ ಬಿ. ವಿ. ಅವರು ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ವೈದ್ಯರ ಸೇವೆಯನ್ನು ಗೌರವಿಸಿ ಪ್ರೋತ್ಸಾಹಿಸಿದ ಈ ಸಾರ್ಥಕ ಕಾರ್ಯಕ್ರಮವನ್ನು ಪ್ರಶಂಸಿಸಿದರು.
ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನಡೆಯಿತು. ವೈದ್ಯರು ಹಾಗೂ ಬ್ಯಾಂಕ್ ಅಧಿಕಾರಿಗಳು ಸಮಾಜದ ಆರೋಗ್ಯ ಮತ್ತು ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು. ಚೌಡೇಶ್ವರಿ ಆಸ್ಪತ್ರೆ ಹಾಗೂ ಚೌಡೇಶ್ವರಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚೌಡೇಶ್ವರಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಬೀರೇಗೌಡ ವೈ. ಸಿ., ರೇಡಿಯಾಲಜಿಸ್ಟ್ ಡಾ. ಮಂಜುನಾಥ್ ವೈ. ಸಿ., ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಉಮಾದೇವಿ ಬಿ. ವಿ. ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗುಣವಂತ ಮಂಜು ಅವರು ಉಪಸ್ಥಿತರಿದ್ದು, ವೈದ್ಯರ ಸೇವೆಯ ಮಹತ್ವ, ಮಾನವೀಯತೆ ಮತ್ತು ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರದ ಕುರಿತು ತಮ್ಮ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್