ಎಸ್ಐಆರ್ ಎನ್ಯೂಮರೇಶನ್ ಜಾಗೃತಿಯಲ್ಲಿ ಸಕ್ರಿಯವಾಗಿರುವ ಶಾಸಕ ವೈ.ಎಂ. ಸತೀಶ್
ಬಳ್ಳಾರಿ, 01 ಜುಲೈ (ಹಿ.ಸ.) ಆ್ಯಂಕರ್ : ರಾಜ್ಯಾದ್ಯಂತ ಎಸ್ಐಆರ್ ಎನ್ಯೂಮರೇಶನ್ ಜಾಗೃತಿ ವೇಗವಾಗಿ ನಡೆದಿದೆ. ಬಳ್ಳಾರಿಯಲ್ಲಿ ವಿಧಾನಪರಿಷತ್ತಿನ ಬಿಜೆಪಿ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸ್ವತಃ ನಿರ್ವಹಿಸುತ್ತಾ, ಮತದಾರರ ಮನೆ ಬಾಗಿಲಿಗೆ ಅವರೇ ಹೋಗಿ, ಎಸ್ಐಆರ್
ಎಸ್ಐಆರ್ ಎನ್ಯೂಮರೇಶನ್ ಜಾಗೃತಿಯಲ್ಲಿ ಸಕ್ರಿಯವಾಗಿರುವ ಶಾಸಕ ವೈ.ಎಂ. ಸತೀಶ್


ಎಸ್ಐಆರ್ ಎನ್ಯೂಮರೇಶನ್ ಜಾಗೃತಿಯಲ್ಲಿ ಸಕ್ರಿಯವಾಗಿರುವ ಶಾಸಕ ವೈ.ಎಂ. ಸತೀಶ್


ಎಸ್ಐಆರ್ ಎನ್ಯೂಮರೇಶನ್ ಜಾಗೃತಿಯಲ್ಲಿ ಸಕ್ರಿಯವಾಗಿರುವ ಶಾಸಕ ವೈ.ಎಂ. ಸತೀಶ್


ಎಸ್ಐಆರ್ ಎನ್ಯೂಮರೇಶನ್ ಜಾಗೃತಿಯಲ್ಲಿ ಸಕ್ರಿಯವಾಗಿರುವ ಶಾಸಕ ವೈ.ಎಂ. ಸತೀಶ್


ಬಳ್ಳಾರಿ, 01 ಜುಲೈ (ಹಿ.ಸ.)

ಆ್ಯಂಕರ್ : ರಾಜ್ಯಾದ್ಯಂತ ಎಸ್ಐಆರ್ ಎನ್ಯೂಮರೇಶನ್ ಜಾಗೃತಿ ವೇಗವಾಗಿ ನಡೆದಿದೆ. ಬಳ್ಳಾರಿಯಲ್ಲಿ ವಿಧಾನಪರಿಷತ್ತಿನ ಬಿಜೆಪಿ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸ್ವತಃ ನಿರ್ವಹಿಸುತ್ತಾ, ಮತದಾರರ ಮನೆ ಬಾಗಿಲಿಗೆ ಅವರೇ ಹೋಗಿ, ಎಸ್ಐಆರ್ ಎನ್ಯೂಮರೇಶನ್ ಅರ್ಜಿ ಭರ್ತಿ ಮಾಡುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಜೂನ್ 30 ರಿಂದ ಎಸ್ಐಆರ್ ಎನ್ಯೂಮರೇಶನ್ ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಆದರೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ. ಎಸ್ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರಿ ಸಿಬ್ಬಂದಿಗಳಲ್ಲೇ ಗೊಂದಲಗಳಿವೆ.

ಇಂಥಹ ಸಂದರ್ಭಗಳಲ್ಲಿ, ಎಸ್ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾರರು ಸ್ವಯಂ ಆಗಿ, ಎಸ್ಐಆರ್ನಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ವಿಧಾನಪರಿಷತ್ತಿನ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಯಶಸ್ವಿಯಾಗಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು, ಜೂನ್ 30 ರಿಂದ ಜುಲೈ 29ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸುತ್ತಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ 2002ರ ಮತದಾರರ ಪಟ್ಟಿಯ ಜೊತೆಯಲ್ಲಿ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡಿ ಮ್ಯಾಪಿಂಗ್ ನಡೆಸಲಾಗುತ್ತಿದೆ ಎಂದರು.

ಅಲ್ಲದೇ, ಈ ಕುರಿತು ಜನಸಾಮಾನ್ಯರಲ್ಲಿ ಸಾಕಷ್ಟು ಗೊಂದಲಗಳಿವೆ. ಏತಕ್ಕಾಗಿ ಈ ಪ್ರಕ್ರಿಯೆ ನಡೆದಿದೆ ಎನ್ನುವ ಅನುಮಾನಗಳಿವೆ. ಮತದಾರರು ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೇ? ಎನ್ನುವ ಪ್ರಶ್ನೆಗಳಿವೆ. ಮತದಾರರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ, ಅವರು ಸ್ವಯಂ ಪ್ರೇರಣೆಯಿಂದ ಎಸ್ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಭರ್ತಿ ಮಾಡುವಲ್ಲಿ ಅಥವಾ ಭರ್ತಿ ಮಾಡಿಸುವಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುತ್ತಿರುವೆ. ಅನೇಕರು ಉತ್ತಮ ಸ್ಪಂದನೆ ತೋರಿಸುತ್ತಿದ್ದಾರೆ ಎಂದರು.

ರಿಯಾಜ್, ಸುರೇಶ್, ಹುಲುಗಮ್ಮ, ಕನಕಮ್ಮ ಅವರು, ಎಸ್ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಭರ್ತಿ ಮಾಡುವ ಕುರಿತು ನಮಗೆ ಗೊತ್ತಿರಲಿಲ್ಲ. ಎಸ್ಐಆರ್ ಅಂದರೆ ಗೊಂದಲಗಳಿದ್ದವು. ನಮ್ಮ ಮನೆಯಲ್ಲಿ ಓದಿದ ಮಕ್ಕಳಿದ್ದರೂ, ಅವರಿಗೆ ಅರ್ಥವಾಗುತ್ತಿಲ್ಲ. ಆದರೆ, ವೈ.ಎಂ. ಸತೀಶ್ ಅವರು, ನಮಗೆ ಎಸ್ಐಆರ್ ಎನ್ಯೂಮರೇಶನ್ ನಮೂನೆಗಳನ್ನು ಭರ್ತಿಯ ಅವಶ್ಯಕತೆಯ ಕುರಿತು ಚೆನ್ನಾಗಿಯೇ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande