ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ಮಹಿಬೂಬ್ ಜೀಲಾನ್ ಅಧಿಕಾರ ಸ್ವೀಕಾರ
ಕೊಪ್ಪಳ, 01 ಜುಲೈ (ಹಿ.ಸ.): ಆ್ಯಂಕರ್ : ಸರ್ಕಾರದ ಅಧಿಸೂಚನೆಯಂತೆ ಮಹಿಬೂಬ್ ಜೀಲಾನ್ ಅವರು ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕಾದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಪತ್ರ ವ್ಯವಹಾರಗಳನ್ನು ಇನ್ನುಮುಂದೆ
ಕೊಪ್ಪಳ ಉಪವಿಭಾಗಾಧಿಕಾರಿ - ಮಹಿಬೂಬ್ ಜೀಲಾನ್


ಕೊಪ್ಪಳ, 01 ಜುಲೈ (ಹಿ.ಸ.):

ಆ್ಯಂಕರ್ :

ಸರ್ಕಾರದ ಅಧಿಸೂಚನೆಯಂತೆ ಮಹಿಬೂಬ್ ಜೀಲಾನ್ ಅವರು ಕೊಪ್ಪಳ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕಾದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇತರೆ ಪತ್ರ ವ್ಯವಹಾರಗಳನ್ನು ಇನ್ನುಮುಂದೆ ಮಹಿಬೂಬ್ ಜೀಲಾನ್ ಅವರ ಹೆಸರಿಗೆ ಕಳುಹಿಸುವಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಗಳನ್ನು ಉಪವಿಭಾಗಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಪ್ಪಳ ಜಿಲ್ಲೆ ವಿಳಾಸಕ್ಕೆ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08539-220247, ಮೊಬೈಲ್ 9019392546 ಅನ್ನು ಸಂಪರ್ಕಿಸಬಹುದಾಗಿದೆ. ಇ-ಮೇಲ್ ಮೂಲಕ ac.koppal1@gmail.com ವಿಳಾಸಕ್ಕೂ ಪತ್ರ ವ್ಯವಹಾರ ನಡೆಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande