ಕೊಪ್ಪಳ : ಸಾಹಿತಿ, ಕಲಾವಿದರ ಏಪ್ರಿಲ್ ಮಾಸಾಶನ ಪಾವತಿ
ಕೊಪ್ಪಳ, 01 ಜುಲೈ (ಹಿ.ಸ.) ಆ್ಯಂಕರ್ : ಜಿಲ್ಲೆಯ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ ಹಾಗೂ ಕಲಾವಿದರಿಗೆ ಕೊಪ್ಪಳ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏಪ್ರಿಲ್-2026ರ ಮಾಹೆಯ ಮಾಸಾಶನವನ್ನು ಪಾವತಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಮಾಸಾಶನ ಪಾವತಿಯಲ್ಲಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ, ಇ
ಕೊಪ್ಪಳ : ಸಾಹಿತಿ, ಕಲಾವಿದರ ಏಪ್ರಿಲ್ ಮಾಸಾಶನ ಪಾವತಿ


ಕೊಪ್ಪಳ, 01 ಜುಲೈ (ಹಿ.ಸ.)

ಆ್ಯಂಕರ್ : ಜಿಲ್ಲೆಯ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ ಹಾಗೂ ಕಲಾವಿದರಿಗೆ ಕೊಪ್ಪಳ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏಪ್ರಿಲ್-2026ರ ಮಾಹೆಯ ಮಾಸಾಶನವನ್ನು ಪಾವತಿಸಲಾಗಿದೆ.

ತಾಂತ್ರಿಕ ಕಾರಣಗಳಿಂದ ಮಾಸಾಶನ ಪಾವತಿಯಲ್ಲಿ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ, ಇದೀಗ ಜಿಲ್ಲೆಯ 256 ಅರ್ಹ ಫಲಾನುಭವಿಗಳಿಗೆ ತಲಾ ರೂ. 2,500 ರಂತೆ ಒಟ್ಟು ರೂ. 6,40,000 ಮೊತ್ತವನ್ನು ಬಿಡುಗಡೆ ಮಾಡಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಇನ್ನೂ ಬಾಕಿ ಇರುವ ಮೇ ಹಾಗೂ ಜೂನ್ 2026ರ ಮಾಹೆಯ ಮಾಸಾಶನವನ್ನೂ ಶೀಘ್ರದಲ್ಲೇ ಪಾವತಿಸಲಾಗುವುದು.

ಈ ಕುರಿತು ಸಾಹಿತಿಗಳು ಹಾಗೂ ಕಲಾವಿದರು ಯಾವುದೇ ಗೊಂದಲಕ್ಕೆ ಒಳಗಾಗದೆ ಸಹಕರಿಸುವಂತೆ ಕೊಪ್ಪಳ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣಕುಮಾರ್ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande