
ಬಳ್ಳಾರಿ, 01 ಜುಲೈ (ಹಿ.ಸ.):
ಆ್ಯಂಕರ್ : ಕೊಳಗಲ್ಲು ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ವಿವಿಧ ಸಂಘಟನೆಗಳು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಕಾಲಿ ಕೊಡಗಳ ಜೊತೆಯಲ್ಲಿ ಬುಧವಾರದಿಂದ ಹಗಲು ರಾತ್ರಿ ಪ್ರತಿಭಟನೆಯನ್ನು ಪ್ರಾರಂಭಿಸಿವೆ.
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಜನರು ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಕೆರೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಲು ಸರ್ವೇ ನಂ. 557 ರಲ್ಲಿ 296 ಎಕರೆ ಕೆರೆ ಭೂಮಿಯಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಲು ಮತ್ತು ಗ್ರಾಮದಲ್ಲಿನ ಸುಮಾರು 300 ಕ್ಕೂ ಹೆಚ್ಚು ಬಡ ಕುಟುಂಬಗಳು ನಿವೇಶನ ಮತ್ತು ವಸತಿ ಇಲ್ಲದೆ ಲಭ್ಯವಿರುವ ಗುಡಿಸಲಿನಲ್ಲಿ ವಾಸಿಸುತ್ತಿವೆ.
ಕೊಳಗಲ್ಲು ಗ್ರಾಮದ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ಡಬಲ್ ರೋಡ್ ನಿರ್ಮಿಸಬೇಕು. ಕೊಳಗಲ್ಲು - ಅಲ್ಲೀಪುರ ಮಧ್ಯೆ ರಸ್ತೆ ನಿರ್ಮಿಸಿ, ಬಸ್ ಸಂಚಾರ ಮಾಡಬೇಕು. ಮಹಿಳ ಶೌಚಾಲಯಗಳನ್ನು ನಿರ್ಮಿಸಬೇಕು. ಗ್ರಾಮ ಪಂಚಾಂಯಿತಿಯಲ್ಲಿ `ಬಾಪೂಜಿ ಸೇವಾ ಕೇಂದ್ರ'ವನ್ನು ಪುನರಾರಂಭ ಮಾಡಬೇಕು ಸೇರಿ ವಿವಿಧ ಬೇಡಿಕೆಗಳ ಕುರಿತು ಅವರು ಮನವಿ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್