
ಹುಬ್ಬಳ್ಳಿ, 07 ಜೂನ್ (ಹಿ.ಸ.) :
ಆ್ಯಂಕರ್ : ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಹೋರಾಟಗಾರರೊಂದಿಗೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಇಂದು ಚರ್ಚೆ ನಡೆಸಿದರು.
ಸಭೆಯಲ್ಲಿ ಹುಬ್ಬಳ್ಳಿ ಪೂರ್ವ ಶಾಸಕರಾದ ಪ್ರಸಾದ್ ಅಬ್ಬಯ್ಯ, ನವಲಗುಂದ ಶಾಸಕರಾದ ಎನ್.ಹೆಚ್.ಕೋನರಡ್ಡಿ, ಧಾರವಾಡ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನೋದ್ ಅಸೂಟಿ, ಹುಡಾ ಅಧ್ಯಕ್ಷರಾದ ಶಾಕಿರ್ ಸನದಿ, ಕೆಪಿಸಿಸಿ ಸದಸ್ಯರಾದ ಷಣ್ಮುಖ ಶಿವಳ್ಳಿ, ಮಾಜಿ ಶಾಸಕರಾದ ಎಂ.ಎಸ್.ಅಕ್ಕಿ, ಮಾಜಿ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಾನಂದ ಬೆಂತೂರ್, ಮಹಾನಗರಪಾಲಿಕೆಯ ಸದಸ್ಯರು, ಪ್ರತ್ಯೇಕ ಮಹಾನಗರಪಾಲಿಕೆ ಹೋರಾಟಗಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.