ಈಗ ನಿಮ್ಮ ಆಸ್ತಿ ನಮೂನೆ-3 ಪಡೆಯುವುದು ಸುಲಭ
ಕೊಪ್ಪಳ, 07 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊಪ್ಪಳ ನಗರಸಭೆಯ ಎಲ್ಲಾ ಆಸ್ತಿಯ ಮಾಲಿಕರಿಗೆ ನಗರಸಭೆಯಿಂದ ವಿತರಿಸಲ್ಪಡುವ ಇ-ಆಸ್ತಿ ಪ್ರಮಾಣ ಪತ್ರ, ನವೀಕರಣ ನಮೂನೆ-3 ನ್ನು ಇನ್ನು ಮುಂದೆ 3 ಕರ್ತವ್ಯ ದಿನಗಳಲ್ಲಿ ಹಾಗೂ ಹೊಸ ನಮೂ
ಈಗ ನಿಮ್ಮ ಆಸ್ತಿ ನಮೂನೆ-3 ಪಡೆಯುವುದು ಸುಲಭ


ಕೊಪ್ಪಳ, 07 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊಪ್ಪಳ ನಗರಸಭೆಯ ಎಲ್ಲಾ ಆಸ್ತಿಯ ಮಾಲಿಕರಿಗೆ ನಗರಸಭೆಯಿಂದ ವಿತರಿಸಲ್ಪಡುವ ಇ-ಆಸ್ತಿ ಪ್ರಮಾಣ ಪತ್ರ, ನವೀಕರಣ ನಮೂನೆ-3 ನ್ನು ಇನ್ನು ಮುಂದೆ 3 ಕರ್ತವ್ಯ ದಿನಗಳಲ್ಲಿ ಹಾಗೂ ಹೊಸ ನಮೂನೆ-3 ನ್ನು 7 ಕರ್ತವ್ಯ ದಿನಗಳಲ್ಲಿ ವಿತರಿಸಲಾಗುವುದು ಎಂದು ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡೂರ್ ಅವರು ತಿಳಿಸಿದ್ದಾರೆ.

ಕೊಪ್ಪಳ ನಗರಸಭೆ ವ್ಯಾಪ್ತಿಯ ಆಸ್ತಿಯ ಮಾಲಿಕರು ತಾವೇ ಸ್ವತ: www.eaasti.gov.in ಸಿಟಿಜನ್ ಲಾಗಿನ್ನ ಮೂಲಕ ತಮ್ಮ ಆಸ್ತಿಯ ದಾಖಲೆಗಳನ್ನು ಲಗತ್ತಿಸಿ, ನಿಯಮಾನುಸಾರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಗಳ ಒಂದು ಪ್ರತಿಯನ್ನು ನಗರ ಸಭೆ ಕಾರ್ಯಾಲಯದ ಸಂಬಂಧಿತ ಕರವಸೂಲಿಗಾರರ ಸಕಾಲ ಕೌಂಟರ್ಗೆ ನೇರವಾಗಿ ತಲುಪಿಸಿ ಸ್ವೀಕೃತಿ ಪಡೆಯಬೇಕು.

ಅರ್ಜಿ ಸಲ್ಲಿಸಲು ನೋಂದಾಯಿತ ಕ್ರಯಪತ್ರ ಅಥವಾ ದಾನಪತ್ರ ಅಥವಾ ಪಾಲುವಿಭಾಗ ಪತ್ರಗಳ ನಕಲುಗಳು, ಸರ್ಕಾರದಿಂದ ನೀಡಲಾದ ಹಕ್ಕುಪತ್ರದ ನಕಲು ಪ್ರತಿ, ಈ ಹಿಂದೆ ಪಡೆದ ನಮೂನೆ-3ರ ಪ್ರತಿ (ನವೀಕರಣಕ್ಕೆ ಮಾತ್ರ), ಚಾಲ್ತಿಸಾಲಿನ ವರೆಗಿನ ಆಸ್ತಿ ಮತ್ತು ನೀರಿನ ತೆರಿಗೆ ರಶೀದಿ ಹಾಗೂ ಋಣಭಾರ ನಮೂನೆ-15 ರ ಪ್ರಮಾಣ ಪತ್ರದೊಂದಿಗೆ (8 ವರ್ಷಗಳಿಂದ ಚಾಲ್ತಿ ಸಾಲಿನವರೆಗೆ) ಅಗತ್ಯ ದಾಖಲೆಗಳನ್ನು ನಿಯಮಾನುಸಾರ ಲಗತ್ತಿಸಿ ಸಿಟಿಜನ್ ಪೆÇೀರ್ಟಲ್ನ ಮೂಲಕ ಸಲ್ಲಿಸಿದ್ದಲ್ಲಿ, ನವೀಕರಣ ನಮೂನೆ-3ನ್ನು ಮೂರು ಕರ್ತವ್ಯದ ದಿನಗಳಲ್ಲಿ ಹಾಗೂ ಹೊಸದಾದ ನಮೂನೆ-3ನ್ನು 7 ಕರ್ತವ್ಯದ ದಿನಗಳಲ್ಲಿ ವಿತರಿಸಲಾಗುವುದು.

ಕೊಪ್ಪಳ ನಗರದ ಎಲ್ಲಾ ಆಸ್ತಿ ಮಾಲಿಕರು ತಾವೇ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಯಾವುದೇ ಮದ್ಯವರ್ತಿಗಳು ಅಥವಾ ಅಪರಿಚಿತ ವ್ಯಕ್ತಿಗಳು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಮುನ್ಸೂಚನೆ ನೀಡದೆ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆಸ್ತಿಯ ಮಾಲಿಕರು ತಮ್ಮ ಆಸ್ತಿಯ ಪತ್ರಗಳನ್ನು ಮಧ್ಯವರ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಭರ್ಂದಿಸಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಕಾರ್ಯಾಲಯದ ಕಂದಾಯಾಧಿಕಾರಿ ಅಥವಾ ಕಂದಾಯ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ನಗರಸಭೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande