
ಕಾರ್ಕಳ, 07 ಜೂನ್ (ಹಿ.ಸ.) :
ಆ್ಯಂಕರ್ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು, ಮರ ಹಾಗೂ ಲೋಹ ಶಿಕ್ಷಣ ವಿಭಾಗಗಳಲ್ಲಿ 18 ತಿಂಗಳ ಅವಧಿಯ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸ ತರಬೇತಿ ಜುಲೈ 1, 2026ರಿಂದ ಆರಂಭವಾಗಲಿದೆ.
18 ರಿಂದ 35 ವರ್ಷದೊಳಗಿನ ಹಾಗೂ ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಯುವಕ-ಯುವತಿಯರು ನೇರ ಸಂದರ್ಶನದ ಮೂಲಕ ಪ್ರವೇಶ ಪಡೆಯಬಹುದು. ಸಂದರ್ಶನವು ಸಂಸ್ಥೆಯ ಆವರಣದಲ್ಲಿ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ತಂದೆ ಅಥವಾ ತಾಯಿಯೊಂದಿಗೆ ಹಾಜರಾಗುವುದು ಕಡ್ಡಾಯವಾಗಿದೆ.
ಸಂದರ್ಶನಕ್ಕೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಕೆಳಕಂಡ ದಾಖಲೆಗಳ ಪ್ರತಿಗಳನ್ನು ತರಬೇಕು:
ಅಭ್ಯರ್ಥಿಯ ಆಧಾರ್ ಕಾರ್ಡ್, ಪೋಷಕರ ಆಧಾರ್ ಕಾರ್ಡ್,
ರೇಷನ್ ಕಾರ್ಡ್, ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್), ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.), ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ, ಪಾಸ್ಪೋರ್ಟ್ ಗಾತ್ರದ 5 ಭಾವಚಿತ್ರಗಳು, ಉತ್ತಮ ಆರೋಗ್ಯದ ವೈದ್ಯಕೀಯ ದೃಢೀಕರಣ ಪತ್ರ, ರಕ್ತದ ಗುಂಪಿನ ವಿವರ.
ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸ್ವ ಉದ್ಯೋಗ ಆರಂಭಿಸಲು ಅಗತ್ಯವಾದ ಬ್ಯಾಂಕ್ ಸಾಲ ಸೌಲಭ್ಯ ದೊರೆಯುವಂತೆ ಕೆನರಾ ಬ್ಯಾಂಕ್ ವತಿಯಿಂದ ನೆರವು ಒದಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು:
ರಾಜೇಶ್ ಶೆಣೈ, ನಿರ್ದೇಶಕರು – 9481402895 / 9449414316, ನಾಗೇಶ್ ಆಚಾರ್ಯ, ಶಿಕ್ಷಕರು 9448501078, ಹರೀಶ್ ಕೆ. ನಾಯಕ್, ಶಿಕ್ಷಕರು – 9844054413
ಸ್ಥಳ: ಸಿ.ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.